Sunday, July 22, 2018

ವಿದ್ಯಾರ್ಥಿ ಸಂಘಟನೆಗಳೆ ವಿದ್ಯಾರ್ಥಿಗಳಿಗೆ ಮುಳುವಾಗುತ್ತಿದ್ದಾವ?

ವಿದ್ಯಾರ್ಥಿ ಸಂಘಟನೆಗಳೆ ವಿದ್ಯಾರ್ಥಿಗಳಿಗೆ ಮುಳುವಾಗುತ್ತಿದ್ದಾವ?

ಹೌದು,ಈ ಒಂದು ಪ್ರಶ್ನೆ ಎಲ್ಲರಲ್ಲೂ ಸಹಜವಾಗಿ ಮೂಡುವಂತದ್ದೆ. ಯಾವುದೇ ಸಂಘಟನೆಗಳಾಗಲಿ (ABVP, NSUI,AIDSO etc) ಅವುಗಳ ಉದ್ದೇಶ, ಸಿದ್ದಾಂತಗಳು ವಿದ್ಯಾರ್ಥಿಗಳ ಪರವಾಗಿಯೆ ಇರಬಹುದು ಆದರೆ ಇವುಗಳಲ್ಲಿನ ಇರುಸು ಮುರುಸು,ಒಗ್ಗಟ್ಟಿನ ಕೊರತೆ,ವಿವಿಧ ರೂಪದ ಸಂಘಟನಾತ್ಮಕ ಹೋರಾಟಗಳು ವಿದ್ಯಾರ್ಥಿಗಳನ್ನ ಗೊಂದಲಕ್ಕೆ ದೂಡುತ್ತಿವೆ.

ಇವುಗಳಲ್ಲಿ ನಡೆಯುತ್ತಾದರು ಏನು ಅಂದರೆ ಇವುಗಳ ಒಗ್ಗಟ್ಟಿನ ಕೊರತೆಯಿಂದ, ಯಾವುದೇ ಒಂದು ವಿದ್ಯಾರ್ಥಿಗಳ ತೊಂದರೆ ಮೇಲಿನ ಹೋರಾಟಗಳು ಅನೇಕ ಸಂಘಟನೆಗಳಿಂದ  ವಿವಿಧ ರೀತಿಯಲ್ಲಿ ವಿವಿಧ ದಿನಗಳಲ್ಲಿ ನಡೆಸುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುತ್ತದೆ.

ಇತ್ತೀಚಿಗೆ ಉಚಿತ ಬಸ್ ಪಾಸ್ ವಿತರಣೆ ವಿಚಾರದಲ್ಲಿ ಎಡವಿದ ಸರ್ಕಾರಕ್ಕೆ ಬಿಸಿ ಮುಟ್ಟಿಸಲೆಂದು ಅನೇಕ ವಿದ್ಯಾರ್ಥಿ ಸಂಘಟನೆಗಳು ಹೋರಾಟ ಮಾಡಿ ಮನವಿ ಕೂಡ ಸಲ್ಲಿಸದರು ಇದರಲ್ಲೇನು ಅಭ್ಯಂತರವಿಲ್ಲ ಆದರೆ ಅನೇಕ ಸಂಘಟನೆಗಳು ದಿನಕ್ಕೊಂದರಂತೆ ಹೋರಾಟ ನಡೆಸಿವೆ. ಹೀಗೆ ದಿನಕ್ಕೊಬ್ಬರಂತೆ ಶಾಲಾ ಕಾಲೇಜ್ ಬಂದ್ ಮಾಡಿಸಿ ಹೋರಾಟದ ಮೂಲ ಆದ ವಿದ್ಯಾರ್ಥಿಗಳನ್ನ ಹೋರಾಟಕ್ಕೆ ಕರೆದೊಯ್ಯುದರಿಂದ ವಿದ್ಯಾರ್ಥಿಗಳ ತರಗತಿಗಳು ಹಾಳಾಗುವುದರಿಂದ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುತ್ತಿದೆ..

ಎಲ್ಲಾ ಸಂಘಟನೆಗಳು ವಿದ್ಯಾರ್ಥಿಗಳ ಪರನೆ ಇವೆ ಆದರೆ ನಿಮ್ಮಲ್ಲಿನ ಒಗ್ಗಟ್ಟಿನ ಶಕ್ತಿಯ ಕೊರತೆ ಕಾಡುತ್ತಿದೆ. ನಿಮ್ಮ ಒಗ್ಗಟ್ಟಿನ ಮಂತ್ರ ವಿದ್ಯಾರ್ಥಿಗಳ ಕೂಗನ್ನ ಹೆಚ್ಚಿಸಿ, ಸಮಸ್ಯೆಗಳಿಗೆ ಪರಿಹಾರ ಕೊಡಿಸಬಲ್ಲದು, ಎಂಬುವುದು ಒಬ್ಬ ವಿದ್ಯಾರ್ಥಿಯಾಗಿ ನನ್ನ ಆಶಯ.    
                 -ಯು ಬಸವರಾಜ