Friday, April 5, 2019

ಯುಗಾದಿ ಹೊಂಬೆಳಕು

 


ಯುಗಾದಿ ಹೊಂಬೆಳಕು

                                  - ಯು ಬಸವರಾಜ ಕೆ.ಹಂಚಿನಾಳ 

ಯುಗ ಯುಗಗಳೆ ಕಳೆಯುತಿವೆ, 
ಹೊಂಬೆಳಕಿನ ಯುಗಾದಿ ಮೆರೆಯುತಿದೆ.   ||ಪ||

ನವ ಚಿಗುರು ಹೊತ್ತು ನಿಂತು, 
ಹಚ್ಚ ಹಸಿರು ಸುತ್ತ ತಂತು, 
ಮನದಲಿ ಹೊಸತನ ಚಿಮ್ಮುಸುತಾ, 
ಸಡಗರದ ಸರಗ ಚೆಲ್ಲಲು, 
ಮನುಕುಲದತ್ತ ಬರುತಿದೆ ಸಂಭ್ರಮದ ಯುಗಾದಿ.  ||೧||

ಬರಿದಾದ ಬೋಳು ಮರಕೆ ಜೀವ ಬಂತು, 
ಪುಟಾಣಿಗಳ ಸಿಹಿ ತಿನ್ನೋ ಆಸೆ ಚಿಗುರಿತು. 
ಪಡುವಣದ ಅಂಚಿನಲಿ ಕಾಮನಬಿಲ್ಲಿನ ಆಟ, 
ಭೂಮಂಡಲಕೆ ವರುಣನ ಆರ್ಭಟ, 
ಇದುವೆ ರೈತರಿಗೆ ಯುಗಾದಿ ಸಂಭ್ರಮದ ಕೂಟ.   ||೨||

ಬೇವು ಮಿತವಾಗಲಿ, ಬೆಲ್ಲ ಹಿತವಾಗಲಿ, 
ಬದುಕು ಬೆಳಗಲಿ, ಬೇವು ಬೆಲ್ಲದ ಮಿಶ್ರಣದಂತೆ. 
ಜ್ಞಾನದ ದೀವಿಗೆ ಮೌಢ್ಯತೆ ಕಳೆದು, 
ಮನ-ಮನೆಗಳಲ್ಲಿ ಶಾಂತಿಯ ಸಂತೋಷ ಚಿಮ್ಮಲಿ, 
ಹೊಸ ವರ್ಷದ ಚಾಂದ್ರಮಾನ ಯುಗಾದಿ.           ||೩||

ಬರವು ಮರೆಯಾಗಲಿ, ಬದುಕು ಹಸನಾಗಲಿ.
ಬಿಸಿಲು ಸರೆಯಲಿ ಮಳೆಯು ಸುರಿಯಲಿ. 
ಭ್ರಷ್ಟತೆ ಕಳೆಯಲಿ, ದಕ್ಷತೆ ಉಳಿಯಲಿ. 
ಉಣ್ಣಿಸುವವ ಉತ್ತಮವಾಗಲಿ,ಕಾಯುವವ ಶಕ್ತನಾಗಲಿ. 
ಇವುಗಳೆಲ್ಲದರೊಂದಿಗೆ ಬರುವ ಯುಗಾದಿ ಸಂಭ್ರಮವಾಗಿರಲಿ.                               ||೪||