Sunday, February 16, 2020

ಬಸನಗೌಡ ಬಾದರ್ಲಿ

      ಬಸನಗೌಡ ಬಾದರ್ಲಿ       

                           - ಯು ಬಸವರಾಜ ಹಂಚಿನಾಳ                                                                               

 ನಮ್ಮೂರ ಸಿಂಧನೂರ ಯುವ ಧೀರ,                           ಯುವ ಜನಾಂಗದ ನೇತಾರ,                                       ಕೆಪಿವೈಸಿಸಿ ಸರದಾರ,                                                 ನಮ್ಮೂರಿನ ಹೆಮ್ಮೆಯ ನಮ್ಮ ಬಸನಗೌಡ ಬಾದರ್ಲಿ. 


ಯುವಶಕ್ತಿಯ ಬೆಳಗಿಸುತಿರುವರು, 
ಸಿಂಧನೂರಿನ ಕೀರ್ತಿ ಪಸರಿಸುತಿರುವರು, 
ಬಡಜನರ ಆಶಾಕಿರಣಿವರು, 
ನಮ್ಮೂರಿನ ಹೆಮ್ಮೆ ನಮ್ಮ ಬಸನಗೌಡ ಬಾದರ್ಲಿ. 

ಹಿರಿಯ ನಾಯಕರ ವಿಶ್ವಾಸಿ ನಾಯಕ, 
ಪಕ್ಷ ಸಂಘಟನೆ ಚತುರಕ, 
ನಾಡಿನ ಜನತೆಯ ಭರವಸೆಯ ಬೆಳಕು, 
ನಮ್ಮೂರಿನ ಹೆಮ್ಮೆಯ ಧೀರ ಬಸನಗೌಡ ಬಾದರ್ಲಿ.

ಜನಸೇವೆಯೇ ಜನಾರ್ದನ ಸೇವೆ ಎಂದು, 
ಸಮಾಜಭಿವ್ರಧ್ಧಿಯ ಕಾಯಕವಾಗಿಸಿಕೊಂಡು, 
ಜನಮನ ಗೆದ್ದಿರುವ ಜನನಾಯಕ, 
ನಮ್ಮೂರಿನ ಹೆಮ್ಮೆಯ ಧೀರ ಬಸನಗೌಡ ಬಾದರ್ಲಿ.

Wednesday, November 13, 2019

ಮಕ್ಕಳ ದಿನಾಚರಣೆ?

ಮಕ್ಕಳ ದಿನಾಚರಣೆ ಅಂದರೆ ನೆನಪಾಗೋದೆ ನೆಹರೂ , ನೆಹರೂರವರ ಮಕ್ಕಳ ಮೇಲಿನ ಪ್ರೀತಿಯಿಂದ ಅವರ ಹುಟ್ಟುಹಬ್ಬವನ್ನ ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತಿದೆ ಆದರೆ ಇಂದಿನ ದಿನಮಾನಗಳಲ್ಲಿ ಒಪ್ಪತ್ತಿನ ಊಟಕ್ಕೂ ಮಕ್ಕಳು ಬೀದಿ ಬೀದಿ ಅಲೆಯುತ್ತಿದ್ದಾರೆ. ಪೌಷ್ಟಿಕತೆ ಕೊರತೆ ಮಕ್ಕಳಲ್ಲಿ ತಾಂಡವ ಆಡುತ್ತಿದೆ, ಅನಾಥ ಮಕ್ಕಳು ಸೂಕ್ತ ಸೂರುಗಳಿಲ್ಲದೆ ನರಳಾಡುತ್ತಿದ್ದಾರೆ. ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿನ ಮಕ್ಕಳ ಮೇಲಿನ ಇವೆಲ್ಲಾ ಪಿಡುಗುಗಳು ಹೋಗಲಾಡಿಸಿ ಮಕ್ಕಳ ದಿನಾಚರಣೆ ಆಚರಿಸಿದರೆ ಆ ಆಚರಣೆಗೆ ಒಂದು ವೈಭವಿಕರಣದ ಅರ್ಥ ಸಿಗುತ್ತದೆ.

Monday, July 15, 2019

ಗುರು ಪೂರ್ಣಿಮಾ ದಿನ (ಗುರು-ಶಿಷ್ಯರ ಸಂಬಂಧ).


ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ:
ಗುರು ಸಾಕ್ಷಾತ್ ಪರ ಬ್ರಹ್ಮ ತಸ್ಮೈ ಶ್ರೀ ಗುರವೇ ನಮ:

ಗುರುವನ್ನು ಸ್ತುತಿಸುವ ಆದಿಶಂಕರರಿಂದ ರಚಿತವಾದ ಈ ಶ್ಲೋಕ ಯಾರಿಗೆ ಗೊತ್ತಿಲ್ಲ ? ಗುರುಗಳನ್ನು ತ್ರಿಮೂರ್ತಿಗಳಿಗೆ ಹೋಲಿಸುತ್ತ ವಂದಿಸುವ ಈ ಶ್ಲೋಕ ಬಹಳ ಅರ್ಥಪೂರ್ಣ. ಸಂಧ್ಯಾವಂದನೆಯ ಮೊದಲ ಮಂತ್ರವೇ ’ಶ್ರೀ ಗುರುಭ್ಯೋ ನಮ: ಹರಿ: ಓಂ’ ಎಂದು. ಗುರುವಿನ ಸ್ಥಾನ ಅಂತಹುದು. ’ಗುರುವಿನ ಗುಲಾಮನನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ಪುರಂದರದಾಸರೇ ಹೇಳಿಲ್ಲವೆ?

ಭಾರತೀಯ ಸಂಸ್ಕೃತಿಯಲ್ಲಿ ಗುರುವಿಲ್ಲದ ಯಾರೇ ಆಗಲಿ ಅವನು ಕೀಳು, ಅನಾಥ ಅಥವಾ ದುರ್ದೈವಿ ಎನ್ನುವಂತೆ ಕಾಣುತ್ತಿದ್ದ ಕಾಲವೊಂದಿತ್ತು. ತಕ್ಕ ಗುರುವನ್ನು  ಅರಸುತ್ತ ಹೋಗಿ ತಮ್ಮ ಗುರಿ ಸಾಧಿಸಿರುವವರ ಕಥೆಯನ್ನು ’ಹಂಸಗೀತೆ’ ’ಸಂಧ್ಯಾ ರಾಗ’ ಚಿತ್ರಗಳಲ್ಲಿ ನಾವು ಕಾಣಬಹುದು. ’ಹಂಸಗೀತೆ’ ಚಿತ್ರದ ಮತ್ತೊಂದು ಸನ್ನಿವೇಶ ಎಂದರೆ, ಗುರಿವಿಗೇ ಸವಾಲೊಡ್ಡಿ ಗೆದ್ದು ಗುರುವಿನ ಸಾವಿಗೂ ಕಾರಣನಾದವನನ್ನು ಎಲ್ಲರೂ ತುಚ್ಚೀಕರಿಸಿ ನೋಡುತ್ತಾರೆ. ಗುರುವಿಗೆ ಇದ್ದ ಮಹತ್ವ ಆ ಮಟ್ಟಗಿನದು.

’ಗುರು’ ಎಂಬ ಪದ ಎಷ್ಟು ಪ್ರಾಚೀನ ಹಾಗು ಅರ್ಥಪೂರ್ಣ ಎಂದರೆ ಪಾಶ್ಚಾತ್ಯ ದೇಶದವರೂ ತಮ್ಮ ನಿಘಂಟಿನಲ್ಲಿ ಅದನ್ನು ಸೇರಿಸಿಕೊಂಡಿದ್ದಾರೆ. MS-WORD ನಲ್ಲಿ ಅದಕ್ಕೆ ಕೊಡುವ ಪರ್ಯಾಯಪದ ’ಮಹರ್ಷಿ’ ಇತ್ಯಾದಿ.

ಗುರುಗಳೆಂದರೆ ಅವರು ಹಿಂದಿನ ಕಾಲದವರಂತೆ ಪಂಚೆಯುಟ್ಟು, ಗಡ್ಡ ಬಿಟ್ಟು ಮರದ ಕೆಳಗೆ ಕೂತು ವೇದ ಪಾಠ ಮಾಡುವವರೇ ಆಗಬೇಕಿಲ್ಲ ಅಥವಾ ಕೈಯಲ್ಲಿ ಬೆತ್ತ ಹಿಡಿದಿರಬೇಕೂ ಅಂತಲೂ ಅಲ್ಲ. ಕೌಶಿಕನಿಗೆ ದಾರಿ ತೋರಿದ ಒಬ್ಬ ನಿಷ್ಟಾವಂತ ಗೃಹಿಣಿಯಾಗಿರಬಹುದು ಅಥವಾ ಅವನಿಗೆ ಬದುಕಿನ ಅರ್ಥ ತಿಳಿಸಿಕೊಟ್ಟ ಕಟುಕ ಧರ್ಮವ್ಯಾಧನೇ ಆಗಿರಬಹುದು. ಹಾಗಾದರೆ ಈ ’ಗುರು’ ಯಾರು ?

’ಗುರು’ ಎಂಬ ಪದದಲ್ಲಿ ’ಗು’ ಎಂದರೆ ನೆರಳು ’ರು’ ಎಂದರೆ ಚದುರಿಸುವುದು  ಎಂದರ್ಥ. ಯಾರು ಅಜ್ಞ್ನಾನ ಅಂಧಕಾರವನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿರುತ್ತಾರೋ ಅವರೇ ನಿಜವಾದ ಗುರು. ಗುರುವು ಶಿಕ್ಷಣ ಕೊಡುತ್ತಾರೆ. ಗುರುವು ಮಾರ್ಗದರ್ಶನ ಮಾಡುತ್ತಾರೆ. ಗುರುವು ಜೀವನೋಪಾಯದ ದಾರಿ ತೋರುತ್ತಾರೆ. ಶಿಷ್ಯರಿಗೆ  ಕಲಿಸಿಕೊಡುವ ಅವರು ಸಾಮಾನ್ಯವಾಗಿ ಶಿಷ್ಯರಿಗಿಂತ ಒಂದು ಕೈ ಮೇಲಿರುತ್ತಾರೆ. ಅದಕ್ಕೆ ಹೊರತಾಗಿ ಉಳಿದವರನ್ನು ’ಗುರುವನ್ನು ಮೀರಿಸಿದ ಶಿಷ್ಯ’ ಎನ್ನುತ್ತಾರೆ.

ಹೀಗೊಂದು ಕಥೆಯಿದೆ. ಒಬ್ಬ ಮಲ್ಲರ ಗುರುವಿನ ಬಳಿ ಹಲವಾರು ಶಿಷ್ಯರಿರುತ್ತಾರೆ. ಅದರಲ್ಲಿ ಒಬ್ಬ ಬಹಳ ಪ್ರಾವೀಣ್ಯತೆ ಸಂಪಾದಿಸಿ ದುರಹಂಕಾರದಿಂದ ಗುರುವಿಗೆ ಸವಾಲು ಹಾಕುತ್ತಾನೆ. ಇಬ್ಬರಿಗೂ ಮಲ್ಲಯುದ್ಧ ಆರಂಭವಾಗಿ ಗುರುವು ಶಿಷ್ಯನನ್ನು ಒಂದೇ ಪಟ್ಟಿನಲ್ಲಿ ಕೆಳಕ್ಕೆ ಬೀಳಿಸುತ್ತಾರೆ. ಶಿಷ್ಯನಿಗೆ ಆಶ್ಚರ್ಯವಾಗುತ್ತದೆ. ಈ ಪಟ್ಟು ತನಗೆ ಕಲಿಸಲಿಲ್ಲವಲ್ಲ ಗುರುಗಳೂ ಎಂದು. ಅದಕ್ಕೆ ಗುರುಗಳು ಹೇಳುತ್ತಾರೆ ’ವಿದ್ಯೆಗಿಂತ ವಿನಯ ದೊಡ್ಡದು. ನಿನಗೆ ಎಲ್ಲಾ ಗೊತ್ತು ಎಂಬ ಅಹಂಭಾವ ಇರುವುದನ್ನು ಕಂಡೇ ನಾನು ಕೆಲವು ಪಟ್ಟುಗಳನ್ನು ಹೇಳಿಕೊಟ್ಟಿಲ್ಲ.  ನೀನು ನನಗೇ ಸವಾಲು ಹಾಕುವ ದಿನಗಳು ಬರುತ್ತದೆ ಎಂದು ನನಗೆ ಗೊತ್ತಿತ್ತು’ ಎನ್ನುತ್ತಾರೆ. ಗುರುಗಳಿಗೆ ದೂರದೃಷ್ಟಿ ಇರುತ್ತದೆ ಎನ್ನುವುದನ್ನು ನಾವು ಈ ಕಥೆಯಿಂದ ಅರಿಯಬಹುದು.

ಮತ್ತೊಂದು ಕಥೆಯಲ್ಲಿ ಗುರುಕುಲದಲ್ಲಿದ್ದ ಒಬ್ಬ ಹುಡುಗ ಕಳ್ಳತನ ಮಾಡುವ ಕೆಟ್ಟ ಹವ್ಯಾಸವನ್ನು ಹೊಂದಿರುತ್ತಾನೆ. ಗುರುಗಳು ಹಲವು ಬಾರಿ ಹೇಳಿ ನೋಡಿದರೂ ಅವನು ಕೇಳಲಿಲ್ಲ. ಹಾಗಾಗಿ ಪ್ರತಿ ಬಾರಿ ಅವನು ಕಳ್ಳತನ ಮಾಡಿದಾಗಲೂ ಒಂದು ಮೊಳೆಯನ್ನು ಗೋಡೆಗೆ ಹೊಡೆಯುತ್ತಿದ್ದರು. ಹಲವಾರು ಮೊಳೆಗಳು ಗೋಡೆ ಸೇರಿದವು. ಕಾಲಾನಂತರ ಹುಡುಗ ತನ್ನ ತುಡುಗ ಬುದ್ದಿಯನ್ನು ತಿದ್ದಿಕೊಂಡ. ಅಂದಿನಿಂದ ಅವನು ಪ್ರತಿ ಒಂದು ಒಳ್ಳೆ ಕೆಲಸ ಮಾಡಿದಾಗಲೂ ಗುರುಗಳು ಒಂದು ಮೊಳೆಯನ್ನು ಗೋಡೆಯಿಂದ ತೆಗೆಯುತ್ತಿದ್ದರು. ಹೀಗೆ ಒಂದು ದಿನ ಗೋಡೆಯಿಂದ ಮೊಳೆಗಳೆಲ್ಲಾ ಹೊರ ಬಂದವು. ಆದರೂ ಗೋಡೆಯಲ್ಲಿನ ತೂತುಗಳು ಮಾತ್ರ ಹಾಗೆ ಇದ್ದವು. ಅದೇಕೆಂದು ಹುಡುಗನು ಕೇಳಿದಾಗ ಗುರುಗಳು ಹೇಳುತ್ತಾರೆ ’ನಿನ್ನಲ್ಲಿ ಕೆಟ್ಟ ಬುದ್ದಿ ಹೋಗಿದೆ ಅದಕ್ಕೇ ಗೊಡೆಯಲ್ಲಿ ಮೊಳೆಗಳಿಲ್ಲ. ಆದರೆ ನೀನು ಕಳ್ಳ ಎಂಬ ನಿನ್ನ ಮೇಲಿರುವ ಆ ಕಪ್ಪು ಚುಕ್ಕಿಯೇ ಈ ಗೋಡೆಯ ಗುರುತುಗಳು. ಅದು ಅಷ್ಟು ಸುಲಭವಾಗಿ ಹೋಗುವುದಿಲ್ಲ’. ಕ್ಲಿಷ್ಟವಾದ ವಿಷಯವನ್ನು ಸರಳವಾಗಿ ಹೇಗೆ ಹೇಳಬಹುದು ಎಂಬುದಕ್ಕೆ ಇದೊಂದು ನಿದರ್ಶನ.

ಮಾರ್ಮಿಕವಾಗಿ ಮಾತನಾಡುವುದು ಒಂದು ಕಲೆ. ಗುರುಗಳು ಈ ರೀತಿ ಸೂಚ್ಯವಾಗಿ ಹೇಳುವಾಗ ಶಿಷ್ಯನಾದವನು ಅಷ್ಟೇ ಚತುರ್ಮತಿಯಾಗಿದ್ದರೆ ಮಾತ್ರ ಅರ್ಥವಾಗುತ್ತದೆ. ಹಿಮಾಲಯಕ್ಕೆ ತೆರಳಿದ್ದ ಗುರುಗಳೊಬ್ಬರು ಹಿಂದಿರುಗಿದಾಗ ತನ್ನ ಪ್ರಿಯ ಶಿಷ್ಯನಾದ ರಾಜನ ಸುತ್ತಲಿರುವವರೂ ನಯವಂಚಕರು ಎಂದು ಅರಿವಾಗುತ್ತದೆ. ಶಿಷ್ಯನು ಅತೀ ಒಳ್ಳೆಯವನಾದ ಪ್ರಯುಕ್ತ ಹೀಗಾಗಿದೆ ಎಂದು ಅರಿತರೂ ಎದುರಿಗೆ ಹೇಳಲಾಗುವುದಿಲ್ಲ. ಬದಿಗೆ ಕರೆದೋ ಅಥವಾ ಗೌಪ್ಯವಾಗಿಯೋ ಕೂಡ ಹೇಳಲಾಗುವುದಿಲ್ಲ. ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬುದೇ ಒಂದು ಕ್ಲಿಷ್ಟ ಸಮಸ್ಯೆಯಾಯಿತು. ಹಾಗಾಗಿ ಎಲ್ಲರ ಸಮಕ್ಷಮದಲ್ಲಿ ರಾಜನಿಗೆ ಹೇಳುತ್ತಾರೆ "ಎಲೈ ರಾಜನ್! ನಿನ್ನ ರಾಜ್ಯವೊಂದು ಶ್ರೀಗಂಧದ ಮರದಂತೆ. ನಿನ್ನ ಒಳ್ಳೆಯತನವೆಂಬ ಸುಗಂಧವು ಎಲ್ಲೆಡೆ ಆವರಿಸಿದ್ದು ತಕ್ಕ ಅಧಿಕಾರಿಗಳು ನಿನ್ನನ್ನು ರಕ್ಷಿಸುತ್ತಿದ್ದಾರೆ" ಎಂದರು. ಗುರುಗಳ ಬೋಳೆತನಕ್ಕೆ ಒಳಗೊಳಗೇ ನಕ್ಕರು ಅಧಿಕಾರಿಗಳು. ಆದರೆ ರಾಜನಿಗೆ "ಶ್ರೀಗಂಧದ ಮರವನ್ನು ಆವರಿಸುವುದು ಸರ್ಪಗಳು" ಎಂದು ಅರಿವಾಗಿ ಕಾಲಕ್ರಮೇಣ ತಕ್ಕ ಕ್ರಮ ತೆಗೆದುಕೊಂಡು ದಕ್ಷ ನಾಯಕರನ್ನು ನೇಮಿಸಿದನಂತೆ. ಇದು ಕಥೆಯೇ ಆಗಿದ್ದರೂ ಗುರು-ಶಿಷ್ಯರು ಒಬ್ಬರನ್ನೊಬ್ಬರು ಎಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು ಎಂಬುದನ್ನು ಸಾಬೀತು ಮಾಡುತ್ತದೆ. ಇಂಥದ್ದೇ ಮಾರ್ಮಿಕ ಅರ್ಥವುಳ್ಳ ಸಂಭಾಷಣೆಯನ್ನು ’ಅರಗಿನ ಮನೆಯ ಸಂದರ್ಭದಲ್ಲಿ’ ವಿದುರ-ಧರ್ಮರಾಯನ ನಡುವೆ ಕೂಡ ಕಾಣಬಹುದು.

ಗುರುಗಳು ಎಲ್ಲ ಕಾಲಕ್ಕೂ, ಎಲ್ಲ ದೇಶದಲ್ಲೂ, ಎಲ್ಲ ಪಂಥದಲ್ಲೂ ಇರುತ್ತಾರೆ. ತಾವು ಕಲಿತ ಅನುಭವ ಪಾಠವನ್ನು ಇನ್ನೊಬ್ಬರಿಗೆ ತಿಳಿಸಿಕೊಡುವವನೂ ಗುರುವೇ ಆಗುತ್ತಾನೆ. ತಮ್ಮ ಜ್ಞ್ನಾನವನ್ನು ಇನ್ನೊಬ್ಬರಿಗೆ ತಿಳಿಸಿ ಕೊಡುವುದರಿಂದ ಜ್ಞ್ನಾನ ಜ್ಯೋತಿ ಬೆಳಗುತ್ತದೆ. ಹೀಗೆ ತಿಳಿಸಿಕೊಡದೇ ಹೋದ ಅಥವಾ ಕಲಿಯದೇ ಹೋದ ವಿಷಯಗಳೇ ಮುಂದೆ ನಶಿಸಿ ಹೋಗುತ್ತದೆ. ಈಗಿನ ನವಯುಗದಲ್ಲಿ ಹಲವಾರು ಕುಲುಕಸುಬುಗಳು ಇದೇ ದಾರಿಯನ್ನು ಹಿಡಿದಿವೆ ಎಂದರೆ ಅದು ಅತಿಶಯೋಕ್ತಿಯಲ್ಲ.

ಎಲ್ಲ ಉತ್ತಮ ಕೆಲಸಗಳನ್ನು ನೆನೆಯಲು ಒಂದು ಶುಭದಿನವಿರುವ ಹಾಗೆ ಗುರುಗಳ ನೆನೆವುದಕ್ಕೂ ಒಂದು ಶುಭದಿನವಿದೆ. ಅದೇ ’ಗುರು ಪೂರ್ಣಿಮಾ’. ತನ್ನ ಜ್ಞ್ನಾನದ ಪರಿಪೂರ್ಣತೆಯಲ್ಲಿ ಗುರುಗಳಿಗೆ ಅಭಿವಂದಿಸುವ ಶುಭ ದಿನವೇ ಗುರು ಪೂರ್ಣಿಮ. ಹಿಂದಿನ ವರ್ಷದಲ್ಲಿ ತಾನು ಕಲಿತಿದ್ದೆಷ್ಟು ಎಂದು ಅರಿತು ತನ್ನ ಮುಂದಿನ ವರ್ಷದಲ್ಲಿ ತಾನೇನು ಕಲಿಯಬೇಕೆನ್ನುವ ದಾರಿಯನ್ನು ನಿರ್ಧಾರ ಮಾಡಿ ಅದರ ಮೇಲೆ ಸಂಪೂರ್ಣ ಗಮನವಿಡುವವುದು ಈ ಶುಭದಿನದ ಮೂಲ ಉದ್ದೇಶ. ಒಂದು ರೀತಿ ವಾರ್ಷಿಕ ಪರೀಕ್ಷೆಯ ತರಹ.

ಡಾ|| ಎಸ್.ರಾಧಾಕೃಷ್ನನ್ ಅವರು ಸರ್ವಶ್ರೇಷ್ಠ ಶಿಕ್ಷಕರು ಎಂದು ಹೆಸರು ಪಡೆದಿದ್ದರು. ಅವರ ಜನ್ಮ ದಿನವಾದ ಸೆಪ್ಟಂಬರ್ 5 ರಂದು ’ಶಿಕ್ಷಕರ ದಿನ’ ಎಂದು ಆಚರಿಸುತ್ತೇವೆ.

’ಉಪನಿಷದ್’ ಎಂಬ ಪದದಲ್ಲಿ ’ಉಪ’ ಎಂದರೆ ಹತ್ತಿರ, ’ನಿ’ ಎಂದರೆ ಕೆಳಗೆ, ’ಷದ್’ ಎಂದರೆ ಕುಳಿತುಕೊಳ್ಳುವುದು. ’ಉಪನಿಷದ್’ ಎಂದರೆ ಗುರುವಿನ ಬಳಿ ಹತ್ತಿರದಲ್ಲಿ ಕುಳಿತು ಮಾರ್ಗದರ್ಶನ ಪಡೆಯುವುದು ಎಂದು. ಕುರುಕ್ಷೇತ್ರ ಯುದ್ದದಲ್ಲಿ  ಕೃಷ್ಣ-ಅರ್ಜುನರ ನಡುವೆ ನೆಡೆದದ್ದು ಇದೇ ಅಲ್ಲವೇ?

ಪಾಠ ಕಲಿಸಿದ ಗುರುವಿಗೆ ಕೃತಜ್ಞ್ನತಾ ಪೂರ್ವಕವಾಗಿ ಕೊಡುವ ಯಾವುದೇ ಆದರೂ ಅದನ್ನು ’ಗುರುದಕ್ಷಿಣೆ’ ಎನ್ನುತ್ತರೆ. ಅದನ್ನು ಗುರುವು ಆಜ್ಞ್ನಾಪೂರ್ವಕವಾಗಿ ಶಿಷ್ಯನಲ್ಲಿ ಕೇಳಿದ್ದಾಗಬಹುದು ಅಥವ ಶಿಷ್ಯನ ಬಲವಂತಕ್ಕೆ ಗುರುವು  ಕೇಳುವುದೂ ಆಗಬಹುದು. ಆಜ್ಞ್ನಾಪೂರ್ವಕವಾಗಿ ಶಿಷ್ಯನ ಹೆಬ್ಬರಳನ್ನೇ ಕೇಳಿದವರು ಗುರು ದ್ರೋಣಚಾರ್ಯರು. ಅದರ ಹಿಂದಿನ ಉದ್ದೇಶ ಬೇರೆ. ಅದು ಇಲ್ಲಿ ಮುಖ್ಯವಲ್ಲ. ಗುರುದಕ್ಷಿಣೆಯ ಅತೀ ಕಠೋರ ರೂಪಕ್ಕೆ ಒಂದು ಉದಾಹರಣೆ ಅಷ್ಟೆ!

ಗುರು ಸಾಂದೀಪನಿಯ ಶಿಷ್ಯರು ಶ್ರೀ ಕೃಷ್ಣ, ಬಲರಾಮ ಹಾಗೂ ಸುಧಾಮ. ಸಕಲ ವಿದ್ಯೆಗಳನ್ನು ಪಾರಂಗತ ಮಾಡಿಕೊಂಡು ಗುರುದಕ್ಷಿಣೆ ಬಗ್ಗೆ ಕೇಳಿದಾಗ, ಅಪಹೃತ ಮಗನ ಚಿಂತೆಯಲ್ಲಿನ ನಿರ್ಲಿಪ್ತತೆಯಿಂದಾಗಿ ಗುರುಗಳು ತಮಗೇನೂ ಬೇಡವೆಂದು ಹೇಳುತ್ತಾರೆ. ಇನ್ನೂ ಬಲವಂತ ಮಾಡಿದಾಗ ಋಷಿಪತ್ನಿಯೊಡನೆ ಕೇಳುವಂತೆ ಹೇಳುತ್ತಾರೆ. ಋಷಿಪತ್ನಿಯು ದು:ಖದಿಂದ ’ಕಳೆದುಹೋದ ನಮ್ಮ ಮಗನನ್ನು ವಾಪಸ್ಸು ಕರೆದುಕೊಂಡು ಬಾ’ ಎಂದು ಕೇಳುತ್ತಾಳೆ. ಸಾಮಾನ್ಯರಿಗೆ ಇದು ಕಷ್ಟವಾದ ಕೆಲಸ ಆದರೆ ಪರಮಾತ್ಮನಿಗೆ ಅಲ್ಲ. ’ಪಾಂಚಜನ್ಯ’ ಎಂಬ ರಕ್ಕಸನು ಋಷಿಕುಮಾರನನ್ನು ಕದ್ದೊಯ್ದಿದ್ದನು. ಕೃಷ್ಣನು ಅವನೊಡನೆ ಯುದ್ಧ ಮಾಡಿ, ಅವನನ್ನು ಸೋಲಿಸಿ, ಋಷಿಕುಮಾರನನ್ನು ಕರೆದುತಂದು ಗುರು ದಕ್ಷಿಣೆಯಾಗಿ ಕೊಡುತ್ತಾನೆ. ಇದು ಗುರುದಕ್ಷಿಣೆ ವಿಚಾರವಾಗಿ ಇನ್ನೊಂದು ಕಥೆ.

ಗುರುದಕ್ಷಿಣೆಯ ಕಠೋರ ರೂಪಕ್ಕೆ ಇನ್ನೊಂದು ಉದಾಹರಣೆ ಉತ್ತಂಕ. ಗುರು ವೇದರ ಪಟ್ಟ ಶಿಷ್ಯ ಉತ್ತಾಲಕ (ಅಥವ ಉತ್ತಂಕ). ಗುರುದಕ್ಷಿಣೆ ಕೊಡುವೆನೆಂದಾಗ ಗುರುಗಳು ಅವನನ್ನು ಗುರು ಪತ್ನಿಯ ಬಳಿ ಕಳಿಸುತ್ತಾರೆ. ಗುರು ಪತ್ನಿಯು ಉತ್ತಂಕನಿಗೆ ಹೇಳುತ್ತಾಳೆ ’ನನಗೆ ಮಹಾರಾಜ ಪೌಶ್ಯನ ಪತ್ನಿಯ ಕಿವಿಯ ಓಲೆಗಳು ಬೇಕು. ಇನ್ನು ನಾಲ್ಕು ದಿನಗಳಲ್ಲಿ ತರದಿದ್ದಲ್ಲಿ ನಿಷ್ಪ್ರಯೋಜಕನಾಗೆಂದು ಶಪಿಸಿ ಬಿಡುತ್ತೇನೆ’ ಎಂದಳು. ಎಂತಹ ಅಗ್ನಿಪರೀಕ್ಷೆ ! ಆತನು ಪೌಶ್ಯನಲ್ಲಿ ಹೋಗಿ ಆತನ ಪತ್ನಿಯನ್ನು ಬೇಡಿ ಓಲೆಗಳನ್ನು ತೆಗೆದುಕೊಳ್ಳುತ್ತಾನೆ. ವಾಪಸ್ಸು ಬರುವಾಗ ಬಾಯಾರಿಕೆಯಾಗಿ ಓಲೆಗಳನ್ನು ಕೆಳಗೆ ಇಟ್ಟಾಗ ಅದನ್ನು ತಕ್ಷಕನು ಕದ್ದೊಯ್ಯುತ್ತಾನೆ. ಅವನನ್ನು ಹಿಂಬಾಲಿಸಿಕೊಂಡು ಹೋಗಿ ಇಂದ್ರನ ಸಹಾಯದಿಂದ ವಾಪಸ್ಸು ಪಡೆದುಕೊಂಡು ಅವನದೇ ಕುದುರೆಯ ಸಹಾಯದಿಂದ ಋಷಿಪತ್ನಿಯ ಬಳಿ ಹೋಗಿ ಅವಳಿಗೆ ಅದನ್ನು ಒಪ್ಪಿಸುತ್ತಾನೆ.

ನಳ-ಋತುಪರ್ಣರ ವಿಷಯದಲ್ಲಿ ಇಬ್ಬರೂ ಗುರುಗಳೇ ! ಆದರೆ ಒಬ್ಬ ಹೇಳಿಕೊಡುವಾಗ ಮತ್ತೊಬ್ಬ ಶಿಷ್ಯನಾಗುತ್ತಾನೆ ... ನಳ ’ಅಶ್ವ ಹೃದಯ’ ವಿದ್ಯೆಯನ್ನು ಋತುಪರ್ಣನಿಗೆ ಹೇಳಿಕೊಟ್ಟರೆ, ಅವನು ನಳನಿಗೆ ಪಗಡೆಯಾಟದಲ್ಲಿ ಗೆಲ್ಲುವ ಮರ್ಮ ಹೇಳಿಕೊಟ್ಟ. ಈ ವಿದ್ಯೆಯಿಂದ ನಳ ತನ್ನ ರಾಜ್ಯವನ್ನು ಮತ್ತೆ ಗೆದ್ದುಕೊಳ್ಳಲು ಸಹಾಯವಾಯಿತು.

ಯಾವ ವಿದ್ಯೆಯಿಂದ ಯಾವಾಗ ಉಪಯೋಗವಾಗುವುದೆಂದು ಯಾರಿಗೆ ಗೊತ್ತು ? ಯಾವುದೇ ವಿದ್ಯೆ ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಅಜಿತಸೇನಾಚಾರ್ಯರು ಮತ್ತು ರನ್ನರ ನಡುವಿನ ಈ ನುಡಿ ಸಂವಾದ ಯಾರು ತಾನೇ ಅರಿಯರು? ಗುರುಗಳ ಹೇಳಿಕೆ ಹೀಗಿದೆ:

ಕೊಂಡು ತಂದು ಹೊತ್ತು ಮಾರಿ
ಲಾಭಗಳಿಸಿ ಹೊಟ್ಟೆಹೊರೆಯಲು
ವಿದ್ಯೆಯೇನು ಬಳೆಯ ಮಲಾರವೇ?

ಈ ಕಾಲಕ್ಕೆ ಮನಸ್ಸಿಗೆ ಬರುವ ಗುರು-ಶಿಷ್ಯರ ಜೋಡಿ ಎಂದರೆ ರಾಮಕೃಷ್ಣ ಪರಮಹಂಸ - ವಿವೇಕಾನಂದ. ಇಂದಿಗೂ ಇವರುಗಳು ಹಾಕಿಕೊಟ್ಟ ಹಾದಿ ನಮಗೆ ಮಾರ್ಗದರ್ಶನವಾಗಿದೆ. ಒಬ್ಬ ಟೀಚರ್ ಶಾಲೆಯಲ್ಲಿ ಮಕ್ಕಳಿಗೆ ಹೇಳಿದರಂತೆ ’ನನಗೆ ವಿವೇಕಾನಂದರಂತಹ ಒಬ್ಬ ವಿದ್ಯಾರ್ಥಿ ಸಿಗಲಿಲ್ಲವಲ್ಲ’ ಎಂದು. ಒಬ್ಬ ಹುಡುಗ ಅದಕ್ಕೆ ಹೇಳಿದ ’ನಮಗೂ ಅಷ್ಟೆ ಸಾರ್. ರಾಮಕೃಷ್ಣರಂತಹ ಒಬ್ಬ ಗುರುಗಳು ಸಿಗಲಿಲ್ಲವಲ್ಲ’ ಎಂದು.

ಹಲವಾರು ಬಾರಿ ಗುರು-ಶಿಷ್ಯರ  ನಡುವೆ ಎಂಥಾ ಸಂಬಂಧ ಉಂಟಾಗಿರುತ್ತದೆ ಎಂದರೆ ಸಾವಿನಲ್ಲೂ ಅದು ಮುಂದುವರೆಯುತ್ತದೆ. ಇದಕ್ಕೊಂದು ಜ್ವಲಂತ ಉದಾಹರಣೆಯೆಂದರೆ ನನ್ನ ತಂದೆ ಹಾಗೂ ಅವರ ಗುರು ಶ್ರೀನಿವಾಸ ಮೂರ್ತಿಗಳ ನಡುವಿನ ಬಾಂಧವ್ಯ. ಇಹಲೋಕದ ವ್ಯಾಪಾರ ಮುಗಿಸಲು ಇಂಥಾ ವಯಸ್ಸು ಎಂಬುದಿಲ್ಲ ಎಂಬುದು ಎಲ್ಲರಿಗೂ ತಿಳಿದಿದ್ದೇ. ಅವರ ಶಿಷ್ಯರಾದ ನನ್ನ ತಂದೆಯವರು ತಮ್ಮ ಪ್ರಯಾಣ ಮುಗಿಸಿದರು. ತಮ್ಮ ದೇಹದ ಒಂದು ಅಂಗವೇ ಕಳೆದುಕೊಂಡಂತಾದ ಅವರ ಗುರುಗಳಿಗೆ ಅದೊಂದು ದೊಡ್ಡ ಆಘಾತವೆನ್ನಬಹುದು. ನಮ್ಮ ತಂದೆಯ ಕಾಲಾನಂತರ ಬಹುಶ: ಆರೇ ತಿಂಗಳಲ್ಲಿ ಅವರೂ ಹರಿಪಾದ ಸೇರಿದರು.

ಗುರು-ಶಿಷ್ಯ ಜೋಡಿಯ ಕಥೆಗಳು ಇನ್ನೂ ಬೇಕಾದಷ್ಟು ಇದೆ. ವಿಶ್ವಾಮಿತ್ರ-ಹರಿಶ್ಚಂದ್ರ, ಚಾಣಕ್ಯ-ಚಂದ್ರಗುಪ್ತ, ಗುರು ಗೋವಿಂದ-ಷರೀಫ ಹೀಗೆ. ಎಲ್ಲ ಕಥೆಯಲ್ಲೂ ನಾವು ಕಾಣುವ ಸಾಮಾನ್ಯ ಅಂಶ ಏನೆಂದರೆ  ಶಿಷ್ಯನು ಗುರುವಿನ ಮೇಲಿಟ್ಟಿದ್ದ ಅಪರಿಮಿತ ಭಕ್ತಿ, ಶಿಷ್ಯನ ಶಿಸ್ತು ಹಾಗೂ ಕಠಿಣವಾದ ಆಜ್ಞ್ನಾಪಾಲನೆ. ತೊಡೆಯ ಮೇಲೆ ತಲೆ ಇಟ್ಟು ಮಲಗಿದ್ದ ಗುರುಗಳಿಗೆ ತೊಂದರೆಯಾಗದಿರಲಿ ಎಂದು ದುಂಬಿಯ ಕಡಿತವನ್ನು ಸಹಿಸಿಯೂ ಶಾಪಕ್ಕೊಳಗಾದ ಕರ್ಣನ ಕಥೆ ಯಾರಿಗೆ ಗೊತ್ತಿಲ್ಲ?

ಈ ದಿನಗಳಲ್ಲಿ ’ಗುರು-ಶಿಷ್ಯ’ ಅರ್ಥದ ಸೊಬಗೇ ಕಳೆದುಹೋಗಿದೆ. ಹಾಗಂತ ಅಂದಿನ ಕಾಲದ್ದೇ ಶ್ರೇಷ್ಟ ಎಂದೇನೂ ಅಲ್ಲ. ಬಲರಾಮನಂತಹ ಗುರುವಿಗೆ ದುರ್ಯೋಧನ ಶಿಷ್ಯನಾಗಿದ್ದ. ಇಂದಿನ ವಿಚಾರವಾಗಿ ನಾ ಹೇಳಹೊರಟಿದ್ದು ಇಂದು ಇದೊಂದು ಲೇವಡಿಯ ಭಾಷಾ ಪ್ರಯೋಗವಾಗಿದೆ. ’ಏನ್ ಗುರೂ, ಕ್ಲಾಸ್ ಬಂಕ್ ಮಾಡಿ ಫಿಲಂಗೆ ಹೋಗಣ್ವಾ?’ ಅನ್ನೋದು ಕೆಲವು ವರ್ಷಗಳ ಹಿಂದಿನ ಮಾತಾದರೆ, ಈಗ ’ಶಿಷ್ಯಾ! ಇವೆಲ್ಲ ನನ್ ಹತ್ರ ಬೇಡ. ನಾನು ಒಂದ್ಸಾರಿ ಲಾಂಗ್ ಎತ್ತಿದರೆ ನಿನ್ನ ಪಟಾಲಂ ಶಾರ್ಟ್ ಆಗತ್ತೆ, ಹುಷಾರ್!!!’.

ಒಳ್ಳೆಯದೂ ಕೆಟ್ಟದ್ದೂ ಎಲ್ಲ ಕಾಲಕ್ಕೂ ಇರುವುದೇ ನಿಜ. ಆದರೂ ಹೀಗೊಂದು ಕವಿತೆ ಇದೆ:

ಆಗಿನ ಕಾಲ:
--------
ಹಿಂದೆ ಗುರುವಿದ್ದ
ಮುಂದೆ ಗುರಿಯಿತ್ತು
ಸಾಗುತ್ತಿತ್ತು ರಣಧೀರರ ಗುಂಪು

ಈಗಿನ ಕಾಲ:
--------
ಹಿಂದೆ ಗುರುವಿಲ್ಲ
ಮುಂದೆ ಗುರಿಯಿಲ್ಲ
ಸಾಗುತ್ತಿದೆ ರಣಹೇಡಿಗಳ ಗುಂಪು

ಈ ಶುಭದಿನ ಗುರು ಪೌರ್ಣಿಮಾ ಆಚರಿಸಲಾಗುತ್ತಿದೆ. ಈ ಸುಸಂಧರ್ಭದಲ್ಲಿ ಜಗತ್ತಿನ ಎಲ್ಲ ಗುರುಗಳಿಗೂ ನನ್ನ ಅನಂತ ವಂದನೆಗಳು ...
- ಯು ಬಸವರಾಜ ಹಂಚಿನಾಳ
(ಸಂಗ್ರಹ-ಬ್ಲಾಗ್ ಸ್ಪಾಟ್) 

Tuesday, May 28, 2019

ಯೋಚನೆ ಬದಲಿಸಿ, ಸರ್ಕಾರಿ ಶಾಲೆ ಉಳಿಸಿ.

ಯೋಚನೆ ಬದಲಿಸಿ,ಸರ್ಕಾರಿ ಶಾಲೆ ಉಳಿಸಿ. 

                                  - ಯು ಬಸವರಾಜ ಕೆ.ಹಂಚಿನಾಳ 



                  ಇನ್ನೇನು ಬೇಸಿಗೆ ಮುಗೀತಾ ಬಂತು, ಅಬ್ಬರದ ಬಿಸಿಲನಲ್ಲಿ ಜನ ಜೀವನ ಕಳೆದದ್ದು ಆಯ್ತು. ಶೈಕ್ಷಣಿಕ ವರ್ಷ ಶುರುವಾಗುವ ಸಮಯವು ಬಂದೆ ಬಿಟ್ಟಿತು.ಇಂತಹ ಸಂದರ್ಭದಲ್ಲಿ ಸಾಮಾನ್ಯವಾಗಿ ಪೋಷಕರಲ್ಲಿ ಮೂಡುವ ಒಂದೇ ಒಂದು ಯಕ್ಷ ಪ್ರಶ್ನೆ ಅಂದರೆ ಅದು "ನಮ್ಮ ಮಕ್ಕಳನ್ನ ಈ ಬಾರಿ ಯಾವ ಶಾಲೆಗೆ ಸೇರಿಸೋಣ?" 

ಹೌದು, ಸಾಮಾನ್ಯವಾಗಿ ಈ ಪ್ರಶ್ನೆ ಉದ್ಭವ ಹಾಗೆ ಆಗುತ್ತೆ. ಆದರೆ ಇಂತಹ ಸಮಯದಲ್ಲಿ ನಮ್ಮ ಜನರ ಮುಂದೆ ಕಾಣುವುದು ಖಾಸಗಿ (ಕಾನ್ವೆಂಟ್,ಪಬ್ಲಿಕ್) ಶಾಲೆಗಳು ಮಾತ್ರ, ಸರ್ಕಾರಿ ಶಾಲೆಗಳು ಕನ್ನಡ ಶಾಲೆಗಳು ಇವರಿಗೆ ನೆನಪೆ ಆಗುವುದಿಲ್ಲ. ಏಕೆಂದರೆ ಸರಕಾರ ಮೇಲೆ ನಂಬಿಕೆ ಇಡಿ. ಸರಕಾರಿ ಶಾಲೆಗಳಿಗೆ ನಿಮ್ಮ ಮಕ್ಕಳನ್ನು ಸೇರಿಸಿ ಎಂದು ಸಾಲು ಸಾಲು ಭಾಷಣ ಕೊಟ್ಟು ಹೊರಡುವ ಬಹುತೇಕರು ತಮ್ಮ ಮಕ್ಕಳನ್ನು ಮಾತ್ರ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಓದಿಸುತ್ತಿರುತ್ತಾರೆ ಎನ್ನುವುದು ಬಹುತೇಕರ ವಿಚಾರದಲ್ಲಿ ಖಂಡಿತವಾಗಿರುತ್ತದೆ.ಅದೂ ಅಲ್ಲದೇ ಸರಕಾರಿ ಶಾಲೆಗಳಲ್ಲಿ ಒಳ್ಳೆಯ ಶಿಕ್ಷಣ ನೀಡುವುದಿಲ್ಲ. ಹಾಗಾಗಿ ಕಷ್ಟವೋ ಸುಖವೋ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಬೇಕು ಎಂದು ಪ್ರತಿ ಪೋಷಕರೂ ಆಸೆ ಪಡುವುದು ಇಂದು ಸಾಮಾನ್ಯವಾಗಿಬಿಟ್ಟಿದೆ.

ಇಂತಹ ಆಸೆ ಪಡುವದರಲ್ಲಿ ಪೋಷಕರದ್ದೇನು ತಪ್ಪಿಲ್ಲ ನಮ್ಮ ಸರ್ಕಾರಗಳ ಕನ್ನಡ ಶಾಲೆಗಳ ನಿರ್ಲಕ್ಷ್ಯ ಧೋರಣೆ, ಕನ್ನಡ ಭಾಷೆ ಮೇಲೆ ನಡೆಯುತ್ತಿರುವ ಧೋರಣೆ ಜನರ ಅನ್ಯಭಾಷೆ ವ್ಯಾಮೋಹ ಇಮ್ಮಡಿಗೊಳಿಸುತ್ತಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮತ್ತು ಅಲ್ಲಿನ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಎಷ್ಟೋ ಯೋಜನೆಗಳನ್ನ ಕೊಟ್ಟರೂ ಅವು ಪೂರ್ಣರೂಪದ ಕಾರ್ಯಕ್ಕೆ ಬರದೆ ಇರುವುದು ಸಹ ವಿಷಾಧಕರ ಸಂಗತಿ. 

ಏನೇ ಇರಲಿ "ಜನ ಮರಳೋ ಜಾತ್ರೆ ಮರಳೋ" ಅನ್ನೋ ಹಾಗೆ ಯಾರೋ ಊರ ಸಾಹುಕಾರ, ಶ್ರೀಮಂತ ಲಕ್ಷ ಲಕ್ಷ ಕೊಟ್ಟು ತಮ್ಮ ಮಕ್ಕಳನ್ನ ಖಾಸಗಿ ಶಾಲೆಗೆ ಸೇರಿಸಿದರೆ, ಜನ ಪ್ರತಿಷ್ಠೆಗೋ, ಗುಣಮಟ್ಟದ ಶಿಕ್ಷಣ ಸಿಗುತ್ತೋ  ಅನ್ನೋ ಕಾರಣಕ್ಕೋ ಸಾಲ ಮಾಡಿಯಾದ್ರು ಪ್ರವೇಶ ತಗೋತಾರೆ ಇವೆಲ್ಲವೂ ಅವರವರ ಭಾವನೆಗಳಿಗೆ ಬಿಟ್ಟಿದ್ದು. ಸರ್ಕಾರಿ ಶಾಲೆ ಉದ್ಧಾರ ಆಗಿಲ್ಲ ಅನ್ನೋ ಜನ ತಮ್ಮ ಯೋಚನೆಗಳನ್ನೇಕೆ ಬದಲಿಸುತ್ತಿಲ್ಲವೋ ತಿಳಿಯುತ್ತಿಲ್ಲ. 

ಸಾಲ ಮಾಡಿ ಲಕ್ಷಾನುಗಟ್ಟಲೆ ಖರ್ಚು ಮಾಡಿ  ಖಾಸಗಿ ಶಾಲೆಗಳಿಗೆ ಮಕ್ಕಳನ್ನ ಸೇರಿಸುವುದಕ್ಕಿಂತ ತಮ್ಮ ಕೈಲಾದಷ್ಟು ಹಣವನ್ನ ಸರ್ಕಾರಿ ಶಾಲೆಗಳಿಗೆ ನೀಡಿ ಪ್ರವೇಶ ಪಡೆದು ಅದಕ್ಕೆ ತಮ್ಮದೆ ಸಮಿತಿ ರಚಿಸಿ ಆ ಹಣವನ್ನು ಶಾಲೆಗಳ ಅಭಿವೃದ್ಧಿಗೆ, ಶಿಕ್ಷಣದ ಗುಣಮಟ್ಟಕ್ಕೆ ವಿನಿಯೋಗಿಸ ಬಹುದಲ್ಲವೆ.ಸರ್ಕಾರಿ ಶಾಲೆಗಳಲ್ಲಿ ಕಲಿತವರು ಏನೂ ಸಾಧನೆ ಮಾಡಿಲ್ಲವೆ ಏನು? ಎಂತಂತಹ ದೊಡ್ಡ ಹುದ್ದೆ ಮತ್ತು ಅಧಿಕಾರದಲ್ಲಿ ಇರುವವರು ಸರ್ಕಾರಿ ಶಾಲೆಯಲ್ಲಿಯೆ ಓದಿದವರು. ಇಂತಹ ಯೋಚನೆಗಳಿಂದ, ಯೋಜನೆಗಳಿಂದ ಸ್ಮಾರ್ಟ್ ಕ್ಲಾಸ್ ಗಳು, ಡಿಜಿಟಲ್ ಶಿಕ್ಷಣ, ಕಂಪ್ಯೂಟರ್ ಶಿಕ್ಷಣ ನಮ್ಮೂರಿನ ಸರ್ಕಾರಿ ಶಾಲೆಗಳಲ್ಲಿಯೇ ನೋಡಬಹುದಲ್ಲವೆ. ನಮ್ಮ ಮಕ್ಕಳು ನಮ್ಮೂರಿನ ಸರ್ಕಾರಿ ಶಾಲೆಗಳಲ್ಲಿಯೆ ಗುಣಮಟ್ಟದ ಶಿಕ್ಷಣ ಪಡೆಯಬಹುದಲ್ಲವೆ? ನಿಮ್ಮ ಇಂತಹ ಒಂದು ಯೋಚನೆ ಶಿಕ್ಷಣ ಕ್ರಾಂತಿಯನ್ನೆ ಹುಟ್ಟುಹಾಕುತ್ತದೆ ಅಂದರೆ ನಿಮ್ಮ ಯೋಚನೆಗಳನ್ನ ಈಕಡೆ ವಾಲಿಸಬಹುದು ತಾನೆ,ಮತ್ತೇಕೆ ತಡ ಯೋಚನೆ ಬದಲಿಸಿ. ಶಿಕ್ಷಣದ ಹೊಸ ಕ್ರಾಂತಿ ನಮ್ಮಿಂದಲೆ ಶುರುವಾಗಲಿ. 
#ಸರ್ಕಾರಿ_ಶಾಲೆ_ಉಳಿಸಿ
#ಕನ್ನಡ_ಬೆಳಸಿ

Friday, April 5, 2019

ಯುಗಾದಿ ಹೊಂಬೆಳಕು

 


ಯುಗಾದಿ ಹೊಂಬೆಳಕು

                                  - ಯು ಬಸವರಾಜ ಕೆ.ಹಂಚಿನಾಳ 

ಯುಗ ಯುಗಗಳೆ ಕಳೆಯುತಿವೆ, 
ಹೊಂಬೆಳಕಿನ ಯುಗಾದಿ ಮೆರೆಯುತಿದೆ.   ||ಪ||

ನವ ಚಿಗುರು ಹೊತ್ತು ನಿಂತು, 
ಹಚ್ಚ ಹಸಿರು ಸುತ್ತ ತಂತು, 
ಮನದಲಿ ಹೊಸತನ ಚಿಮ್ಮುಸುತಾ, 
ಸಡಗರದ ಸರಗ ಚೆಲ್ಲಲು, 
ಮನುಕುಲದತ್ತ ಬರುತಿದೆ ಸಂಭ್ರಮದ ಯುಗಾದಿ.  ||೧||

ಬರಿದಾದ ಬೋಳು ಮರಕೆ ಜೀವ ಬಂತು, 
ಪುಟಾಣಿಗಳ ಸಿಹಿ ತಿನ್ನೋ ಆಸೆ ಚಿಗುರಿತು. 
ಪಡುವಣದ ಅಂಚಿನಲಿ ಕಾಮನಬಿಲ್ಲಿನ ಆಟ, 
ಭೂಮಂಡಲಕೆ ವರುಣನ ಆರ್ಭಟ, 
ಇದುವೆ ರೈತರಿಗೆ ಯುಗಾದಿ ಸಂಭ್ರಮದ ಕೂಟ.   ||೨||

ಬೇವು ಮಿತವಾಗಲಿ, ಬೆಲ್ಲ ಹಿತವಾಗಲಿ, 
ಬದುಕು ಬೆಳಗಲಿ, ಬೇವು ಬೆಲ್ಲದ ಮಿಶ್ರಣದಂತೆ. 
ಜ್ಞಾನದ ದೀವಿಗೆ ಮೌಢ್ಯತೆ ಕಳೆದು, 
ಮನ-ಮನೆಗಳಲ್ಲಿ ಶಾಂತಿಯ ಸಂತೋಷ ಚಿಮ್ಮಲಿ, 
ಹೊಸ ವರ್ಷದ ಚಾಂದ್ರಮಾನ ಯುಗಾದಿ.           ||೩||

ಬರವು ಮರೆಯಾಗಲಿ, ಬದುಕು ಹಸನಾಗಲಿ.
ಬಿಸಿಲು ಸರೆಯಲಿ ಮಳೆಯು ಸುರಿಯಲಿ. 
ಭ್ರಷ್ಟತೆ ಕಳೆಯಲಿ, ದಕ್ಷತೆ ಉಳಿಯಲಿ. 
ಉಣ್ಣಿಸುವವ ಉತ್ತಮವಾಗಲಿ,ಕಾಯುವವ ಶಕ್ತನಾಗಲಿ. 
ಇವುಗಳೆಲ್ಲದರೊಂದಿಗೆ ಬರುವ ಯುಗಾದಿ ಸಂಭ್ರಮವಾಗಿರಲಿ.                               ||೪||
                                       

Friday, January 18, 2019

ಎಮ್ಮೆ ಕಾಯುವ ಹುಡುಗನ ಇಂಗ್ಲಿಷ್ ಸಾಧನೆಯ ಯಶೋಗಾಥೆ!

ಎಮ್ಮೆ ಕಾಯುವ ಹುಡುಗನ ಇಂಗ್ಲಿಷ್ ಸಾಧನೆಯ ಯಶೋಗಾಥೆ! 

        -ಯು ಬಸವರಾಜ ಕೆ.ಹಂಚಿನಾಳ                                ತಾ. ಸಿಂಧನೂರು ಜಿ. ರಾಯಚೂರು 

                             
                     ಪ್ರತೀ ಯಶಸ್ಸಿನ ಹಿಂದೆಯೂ ನೋವಿನ ಕಥೆಯಿದೆ! ಪ್ರತಿ ನೋವಿನ ಪಯಣ ಕೂಡ ಯಶಸ್ಸಿನಲ್ಲೇ ಕೊನೆಗೊಳ್ಳುತ್ತದೆ! ನಿಜ, ಈ ಜೀವನಗಾಥೆಯಂತೂ ಅಕ್ಷರಶಃ ಬೆರಗು ಮೂಡಿಸುವಂಥದ್ದು, ಪ್ರೇರಣೆ ನೀಡುವಂಥದ್ದು, ಜೀವನದ ಮೇಲೆ ಪ್ರೀತಿ ಹುಟ್ಟಿಸುವಂಥದ್ದು. ಮಗು ತೊದಲು ನುಡಿ ಆಡಲು ಶುರು ಮಾಡುತ್ತಿದ್ದಂತೆ ಈಗಿನ ಅಪ್ಪ-ಅಮ್ಮಂದಿರು ಅದನ್ನು ಶಾಲೆಗೆ ಸೇರಿಸಿ, ‘ಕಾಂಪಿಟಿಟಿವ್
ವರ್ಲ್ಡ್’ನ ಕುದುರೆಯಾಗಿಸಿ ಬಿಡುತ್ತಾರೆ. ಅಂಥದ್ದರಲ್ಲಿ 16ನೇ ವಯಸ್ಸಿನವರೆಗೂ ಈ ಹುಡುಗ ಶಾಲೆ ಮುಖವನ್ನೇ ನೋಡಿರಲಿಲ್ಲ! ಅಕ್ಷರಗಳ ಲೋಕ ಪ್ರವೇಶಿಸಿರಲಿಲ್ಲ! ಮನೆಯಲ್ಲಿ ಅಪ್ಪ-ಅಮ್ಮ, ಒಂಭತ್ತು ಮಕ್ಕಳು! ಇವನು ಐದನೇಯವನು. ಎಮ್ಮೆ ಮೇಯಿಸೋದು, ಮನೆಗೆ ಕಟ್ಟಿಗೆ ತಂದು ಹಾಕೋದು, ಕೃಷಿ ಕೆಲಸ ಮಾಡೋದು ದಿನಚರಿ. ಮನೆ-ಗದ್ದೆ ಬಿಟ್ಟರೆ ಬೇರೆ ಜಗತ್ತಿಲ್ಲ, ಆಪ್ತಸ್ನೇಹಿತರೆಂದರೆ ಎಮ್ಮೆಗಳೇ. ತನ್ನ ಮನಸ್ಸಿನ ಭಾವನೆಗಳನ್ನು ಅವುಗಳೊಡನೇ ಹಂಚಿಕೊಳ್ಳುತ್ತಿದ್ದ. ‘ಎಲ್ಲ ಚುಕ್ಕೋಳು (ಮಕ್ಕಳು) ಸಾಲಿಗ ಹೊಂಟಾವ್, ನಾನ್ಯಾಕ್ ಹೋಗ್ಬಾರದು?’ ಅಂತ ಪ್ರಶ್ನಿಸಿದರೆ ಪಾಪ ಆ ಮೂಕ ಎಮ್ಮೆಗಳು ಏನು ಉತ್ತರ ನೀಡಬೇಕು ಹೇಳಿ. ಶಾಲೆ ಕಾಂಪೌಂಡಿನ ಹೊರಗಡೆ ನಿಂತು ಒಳಗೆ ಕುತೂಹಲದ ಕಣ್ಣುಗಳಿಂದ ಇಣುಕಿ ಮೇಷ್ಟ್ರು ಮಕ್ಕಳಿಗೆ ಹೇಗೆ ಕಲಿಸುತ್ತಾರೆ ಎಂದು ಗಮನಿಸುತ್ತಿದ್ದ, ಸ್ವಲ್ಪ ಹೊತ್ತಲ್ಲೇ ಮತ್ತೆ ಎಮ್ಮೆಗಳ ನೆನಪಾಗಿ ಅವುಗಳ ಕಡೆ ಓಡುತ್ತಿದ್ದ!
ಇಂಥ ಹುಡುಗ ಮೊನ್ನೆ ಮೊನ್ನೆ ವಿಜಯಪುರದ ಕಗ್ಗೋಡಿನಲ್ಲಿ ಯುವ ಸಂಗಮವನ್ನು ಉದ್ದೇಶಿಸಿ ನಿರರ್ಗಳ ಕನ್ನಡ-ಇಂಗ್ಲಿಷಿನಲ್ಲಿ ಮಾತನಾಡುತ್ತಿರ ಬೇಕಾದರೆ ನೆರೆದ ಸಾವಿರಾರು ಯುವಕರು ತಬ್ಬಿಬ್ಬಾಗಿ ಹೋದರು! ಅಷ್ಟೇ ಅಲ್ಲ, ಉದ್ಯಮಿ ಮುಕೇಶ್ ಅಂಬಾನಿ, ನೀತು ಅಂಬಾನಿ. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್, ಅನಿಲ್ ಕುಂಬ್ಳೆ… ಇಂಥ ಘಟಾನುಘಟಿಗಳೆಲ್ಲ ಈತನ ಸಾಧನೆಗೆ ಶರಣು ಎಂದಿದ್ದಾರೆ. ‘ಶಿಕ್ಷಣದ ನೀತಿ ವಿದ್ಯಾರ್ಥಿಗಳ ಆಸಕ್ತಿ, ಭಾವನೆಗಳಿಗೆ ಅನುಸಾರವಾಗಿ ರೂಪುಗೊಳ್ಳಬೇಕು, ಆಗ ಅವರು ಆಯಾಕ್ಷೇತ್ರದ ನಾಯಕರಾಗಬಲ್ಲರು’ ಎಂದು ಖ್ಯಾತ ಶಿಕ್ಷಣ ತಜ್ಞ, ಚಿಂತಕ ಡಾ.ಬಸವರಾಜ್ ಪಾಟೀಲ್ ಸೇಡಂ ರಾಜ್ಯಸಭೆಯಲ್ಲಿ ಬಲವಾಗಿ ಪ್ರತಿಪಾದಿಸುವಾಗ ಅವರು ಉದಾಹರಣೆಯಾಗಿ ನೀಡಿದ್ದು ಈ ಹುಡುಗನ ಯಶೋಗಾಥೆಯನ್ನೇ! ಹೌದು, 16 ವರ್ಷದವರೆಗೂ ತನ್ನ ಹಳ್ಳಿಯನ್ನು ಬಿಟ್ಟರೆ ಹೊರ ಜಗತ್ತನ್ನೇ ಕಾಣದ ವ್ಯಕ್ತಿ ಪ್ರಬಲ ಇಚ್ಛಾಶಕ್ತಿ, ಕಠಿಣ ಪರಿಶ್ರಮ, ದೃಢಸಂಕಲ್ಪ, ಸಾಧನೆಯ ಹಸಿವಿನ ಪರಿಣಾಮವಾಗಿ ಎಷ್ಟು ಎತ್ತರಕ್ಕೆ ಬೆಳೆದಿದ್ದಾನೆ ಎಂದರೆ ಲಕ್ಷೋಪಲಕ್ಷ ಮಕ್ಕಳ ಬಾಳಲ್ಲಿ ಜ್ಞಾನಜ್ಯೋತಿ ಬೆಳಗಿ, ಈ ನಾಡಿನ ಖ್ಯಾತ ಮೋಟಿವೇಷನಲ್ ಸ್ಪೀಕರ್ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
      ರಮೇಶ್ ಬಲ್ಲೀದರ ಜೊತೆ ಕಳೆದ ಸುಮಧುರ ಕ್ಷಣಗಳು.... 
ಹೆಸರು ರಮೇಶ್ ಬಲ್ಲಿದ್. ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕೋತಿಗುಡ್ಡ ಸ್ವಂತ ಊರು. ತಂದೆ ತಿಮ್ಮಪ್ಪ ಬಲ್ಲಿದ್, ತಾಯಿ ಬಸವ್ವ. ರಮೇಶ್ ಬದುಕಿನಲ್ಲಿ ಮಹತ್ವದ ತಿರುವು ಬಂದಿದ್ದು 2007ರಲ್ಲಿ, ಅದು ತೀರಾ ಅನಿರೀಕ್ಷಿತವಾಗಿ. ಗ್ರಾಮೀಣ ಯುವಕರ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಬೆಂಗಳೂರು ಮೂಲದ ಹೆಡ್ ಹೆಲ್ಡ್ ಹೈ ಸಂಸ್ಥೆಯ ರಾಜೇಶ್ ಭಟ್ ಮತ್ತು ಮತ್ತವರ ತಂಡ ಪ್ರತಿಭಾವಂತ ಮಕ್ಕಳ ಹುಡುಕಾಟದಲ್ಲಿ ಪ್ರವಾಸ ಮಾಡುತ್ತ ಕೋತಿಗುಡ್ಡಕ್ಕೆ ತಲುಪಿದಾಗ ರಮೇಶ್ ಅವರ ಕಣ್ಣಿಗೆ ಬಿದ್ದ. ಇವನ ಬಾಯಿಂದ ‘ಮೈ ನೇಮ್ ಇಸ್ ರಮೇಶ್’ ಎಂದು ಹೇಳಿಸಲು ರಾಜೇಶ್ ಹರಸಾಹಸವನ್ನೇ ಮಾಡಬೇಕಾಯಿತು. ಆದರೆ, ಈತನ ಕಲಿಕಾಆಸಕ್ತಿ ಕಂಡು ಸಂಸ್ಥೆಯ ತರಬೇತಿಗೆ ಆಯ್ಕೆ ಮಾಡಿ, ಬೆಂಗಳೂರಿಗೆ ಬರುವಂತೆ ಪತ್ರ ಕಳಿಸಿದರು. ಆಗ ನಿಜವಾದ ಸವಾಲು ಎದುರಾಯಿತು. ಅಪ್ಪ-ಅಮ್ಮ ರಮೇಶ್​ನನ್ನು ಬೆಂಗಳೂರಿಗೆ ಕಳುಹಿಸಲು ಸುತಾರಾಂ ಒಪ್ಪಲಿಲ್ಲ. ‘ಅಲ್ಲಪ್ಪ ನೀನು ಅಲ್ಲಿಗೆ ಹೋದ್ರೆ ಹೊಲದಲ್ಲಿ ದುಡಿಯೋರಾರು? ಎಮ್ಮೆ ಮೈ ತೊಳೆಯುವರಾರು? ಆ ಕೆಲಸಕ್ಕೆಲ್ಲ ಜನ ಇಡಲು ನಮ್ಮಿಂದ ಆಗುತ್ತಾ?’ ಅಂದುಬಿಟ್ಟರು. ಆಗಲೇ ರಮೇಶ್ ಲೈಫ್​ಲ್ಲಿ ಮತ್ತೊಬ್ಬ ಹೀರೋನ ಎಂಟ್ರಿ ಆಗುತ್ತದೆ. ಅದು ಬೇರಾರೂ ಅಲ್ಲ. ರಮೇಶನ ತಮ್ಮ ಹನುಮಂತ ಬಲ್ಲಿದ್. ಅಪ್ಪ-ಅಮ್ಮ ಇವನಿಗೆ ಹೇಳಿದ ಮಾತನ್ನು ಕೇಳಿಸಿಕೊಂಡ ಹನುಮಂತ ಅಣ್ಣನನ್ನು ಹೊರಗೆ ಕರೆದ. ಎಮ್ಮೆ ಮೇಯಿಸಲು ಉಪಯೋಗಿಸುತ್ತಿದ್ದ ಕಟ್ಟಿಗೆಯಿಂದಲೇ ಈತನ ಎತ್ತರವನ್ನು ಅಳತೆ ಮಾಡಿ, ‘ಅಣ್ಣೋ, ನೀನು ಇವರ ಮಾತು ಕೇಳ್ಬೇಡ. ನೋಡು, ಎಷ್ಟು ಎತ್ತರ ಬೆಳ್ದಿ. ನಿಂಗೀಗ ವಯಸ್ಸಾಗೈತಿ, ಈಗ ಯಾರೂ ನಿನ್ನನ್ನು ಸ್ಕೂಲಿಗೆ ಸೇರಿಸಿಕೊಳ್ಳಲ್ಲ, ಅದಕ್ಕ, ಬಂದಿರೋ ಅವಕಾಶ ಕಳ್ಕೋಬೇಡ. ಪೇಟೆಯವರು ಇಂಗ್ಲಿಷ್ ಕಲಿಸ್ತಾರಂತಲ್ಲ ಹೋಗು, ನಾನಾದ್ರೆ ಚಿಕ್ಕೋನು, ಕೆಲ ವರ್ಷ ಬಿಟ್ಟೂ ಸಾಲಿಗ ಹೋಗ್ಬಹುದು, ಎಮ್ಮೆ-ಗಿಮ್ಮೆ ನಾ ನೋಡ್ಕೀತಿನಿ, ನೀ ಮಾಡ್ತಿದ್ದ ಕೆಲಸ ಎಲ್ಲ ನಾ ಮಾಡ್ತಿನಿ’ ಅಂತ ಪಟಪಟನೇ ಹೇಳಿದ. ಆಗ 2ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 9 ವರ್ಷದ ಹನುಮಂತ ಅಣ್ಣನಿಗಾಗಿ ಶಾಲೆ ಬಿಟ್ಟು, ಎಮ್ಮೆ ಹಿಂದೆ ಹೋದ!
ಇತ್ತ ಮೊದಲಬಾರಿ ಬೆಂಗಳೂರಿಗೆ ಬಂದ ರಮೇಶನಿಗೆ ವಿದೇಶಕ್ಕೆ ಬಂದಂತೆ ಆಗಿಬಿಟ್ಟಿತ್ತು. ಆದರೆ, ಹೆಡ್ ಹೆಲ್ಡ್ ಹೈ ತಂಡದ ಸದಸ್ಯರು ಪರಿಣಾಮಕಾರಿ ತರಬೇತಿ ಆರಂಭಿಸಿದರು. ಮೊದಲಿಗೆ ಇಂಗ್ಲಿಷ್ ಕಲಿಕೆ. ಎಲ್ಲರೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ. 6 ತಿಂಗಳ ತರಬೇತಿಯಲ್ಲಿ 4 ತಿಂಗಳು ಪೂರೈಸುವುದರಲ್ಲೇ ರಮೇಶ್ ಇಂಗ್ಲಿಷ್ ಕಲಿತು ಬಿಟ್ಟಿದ್ದ! ಮುಂದಿನ ಕಲಿಕೆ ಕಂಪ್ಯೂಟರ್​ನತ್ತ. ಬೇಸಿಕ್ ಸಂಗತಿಗಳನ್ನು ಬೇಗನೆ ಗ್ರಹಿಸಿದ ಈತ ಒಂದು ನಿಮಿಷದಲ್ಲಿ 70 ಶಬ್ದಗಳನ್ನು ಟೈಪಿಸುವಷ್ಟು ವೇಗ ಗಿಟ್ಟಿಸಿಕೊಂಡ. ಗ್ರಾಮೀಣ ಪ್ರದೇಶದ ಇತರೆ ಮಕ್ಕಳಿಗೆ ಈತನೇ ಪಾಠ ಮಾಡಲು ಶುರು ಮಾಡಿದ. ರಮೇಶ್​ನಲ್ಲಿ ಅಸಾಧಾರಣ ಸಾಮರ್ಥ್ಯವಿದೆ ಎಂದು ಅರಿವಾದದ್ದೇ ಆಗ. ಬೆಂಗಳೂರಿಗೆ ಬಂದ ಏಳು ತಿಂಗಳ ನಂತರ ಅಣ್ಣನ ಮದುವೆಗೆಂದು ಊರಿಗೆ ಹೋಗುವಷ್ಟರಲ್ಲಿ ಎಷ್ಟು ಬದಲಾಗಿಬಿಟ್ಟಿದ್ದನೆಂದರೆ ತಾಯಿಯೇ ರಮೇಶನನ್ನು ಗುರುತು ಹಿಡಿಯಲಿಲ್ಲ, ಯಾರೋ ಬ್ಯಾಂಕ್ ಅಧಿಕಾರಿ ಬಂದಿದ್ದಾರೆಂದು ತಿಳಿದು ಕೂಡಲು ಕುರ್ಚಿ ತಂದಿಟ್ಟರು. ಆಗ ಜೇಬಲ್ಲಿದ್ದ ಹಳೇ ಫೋಟೋ ತೆಗೆದು ತೋರಿಸಿ ‘ಅವ್ವಾ ನಾನ್ ಕಣೇ ನಿನ್ನ ರಮೇಶಾ’ ಅಂದಾಗ ಖುಷಿಯಲ್ಲಿ ಅಮ್ಮನ ಕಣ್ಣಂಚು ಒದ್ದೆ. ಮುಂದೆ ಬಿಪಿಒ ಒಂದರಲ್ಲಿ ಕೆಲಸವೂ ಸಿಕ್ಕಿತು, ತನ್ನ ಜಾಣ್ಮೆಯಿಂದ ಸ್ವಲ್ಪ ದಿನದಲ್ಲೇ ಟೀಮ್ ಲೀಡರ್ ಆದ. ಮುಂದೆ ಕಂಪ್ಯೂಟರ್ ವಿಭಾಗದ ಹೆಡ್ ಆದ.
ಆದರೆ, ತಾನು ಬೆಳೆದರೆ ಸಾಕೇ? ಕೋತಿಗುಡ್ಡದ ತನ್ನಂಥ ಯುವಕರನ್ನು ಮುಂದೆ ತರಬೇಕಲ್ವ ಎಂದು ಯೋಚಿಸಿ ಗಂಗಾವತಿ ಬಳಿಯ ಕನಕಗಿರಿಗೆ ಬಂದು ‘ರೂರಲ್ ಬ್ರಿಡ್ಜ್’ ಎಂಬ ಸಂಸ್ಥೆ ಕಟ್ಟಿ, ಅಲ್ಲಿನ ಮಕ್ಕಳಿಗೆ ಉಚಿತವಾಗಿ ಕಂಪ್ಯೂಟರ್ ಹೇಳಿಕೊಟ್ಟ. ಮುಂದೆ, ಅವರಿಗೆ ಉದ್ಯೋಗ ದೊರಕಿಸಲು 2009ರಲ್ಲಿ ಬಿಪಿಒ ಹುಟ್ಟುಹಾಕಿದ. ಪ್ರಸಕ್ತ ಗ್ರಾಮೀಣ ಭಾಗದ 120 ಯುವಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ತನ್ನ ಏಳ್ಗೆಗಾಗಿ ತ್ಯಾಗ ಮಾಡಿದ ಹನುಮಂತನಿಗೂ ಉತ್ತಮ ಬದುಕು ಕಲ್ಪಿಸಬೇಕು, ಅದಕ್ಕಾಗಿ ಬೆಂಗಳೂರಿನಲ್ಲಿ ತರಬೇತಿ ಕೊಡಿಸಬೇಕು ಎಂದು ನಿರ್ಧರಿಸಿದ ರಮೇಶ್. ಹನುಮಂತ ತರಬೇತಿಗೂ ಆಯ್ಕೆ ಆದ. ಆದರೆ, ವಿಧಿ ಇಲ್ಲಿ ಕ್ರೂರ ಆಟವಾಡಿತು. 2014ರ ಫೆಬ್ರವರಿ 4ರಂದು ತರಬೇತಿಗೆ ಆಯ್ಕೆ ಆಗಿದ್ದ ಹನುಮಂತ ಫೆ.10ರಂದು ಆ ಸಂಸ್ಥೆಯನ್ನು ಸೇರಿಕೊಳ್ಳಬೇಕಿತ್ತು. ಖಾಸಗಿ ಚಾನಲ್​ನ ಸಂದರ್ಶನವೊಂದಕ್ಕೆ ರಮೇಶ್​ನ ಬಾಲ್ಯರೂಪದಲ್ಲಿ ನಟಿಸಿದ ಹನುಮಂತ (ಫೆ.6) ಮುಂದೆ ಎರಡೇ ದಿನಗಳಲ್ಲಿ ಟ್ರಾ್ಯಕ್ಟರ್ ಅಪಘಾತಕ್ಕೆ ಬಲಿಯಾದ. ತನ್ನ ಬಾಳು ರೂಪಿಸಿದ ಪ್ರೀತಿಯ ತಮ್ಮನನ್ನು ಕಳೆದುಕೊಂಡ ದುಃಖ ರಮೇಶನಿಗೆ ಎಷ್ಟು ತೀವ್ರವಾಗಿ ಕಾಡಿತೆಂದರೆ, ‘ಇನ್ನು ನನ್ನ ಜೀವನಕ್ಕೇನು ಅರ್ಥ’ ಅಂತ ನೊಂದುಕೊಂಡ. ಮೂರ್ನಾಲ್ಕು ತಿಂಗಳು ಖಿನ್ನತೆಯಲ್ಲೇ ಕಳೆದ. ಆಗ ದುಃಖದಿಂದ ಮೇಲೆದ್ದು ಹೊಸ ಬದುಕು ಆರಂಭಿಸಲು ಸ್ಪೂರ್ತಿ ತುಂಬಿದ್ದು ಆ ಹನುಮಂತನೇ. ‘ನನ್ನ ಸಾವಿರಾರು ಗ್ರಾಮೀಣ ಮಕ್ಕಳಲ್ಲೇ ನನ್ನ ತಮ್ಮನನ್ನು ಹುಡುಕಬೇಕು, ಆ ಮಕ್ಕಳಲ್ಲಿ ಜ್ಞಾನ ಮತ್ತು ಕೌಶಲ ತುಂಬಬೇಕು’ ಎಂದು ನಿರ್ಧರಿಸಿದ ರಮೇಶ್ ರಾಜ್ಯದ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳಿಗೆ ತೆರಳಿ ವ್ಯಕ್ತಿತ್ವ ವಿಕಸನ, ಮಾನವೀಯ ಮೌಲ್ಯ, ನಾಯಕತ್ವ ಗುಣ, ಜೀವನಕೌಶಲಗಳ ಬಗ್ಗೆ ತರಬೇತಿ ನೀಡುತ್ತ ಮೋಟಿವೇಷನಲ್ ಸ್ಪೀಕರ್ ಆಗಿ ರೂಪುಗೊಂಡ. ರಾಜ್ಯ ಮಾತ್ರವಲ್ಲದೆ ದೇಶದ ಹಲವೆಡೆ 1 ಸಾವಿರಕ್ಕೂ ಅಧಿಕ ಕಾರ್ಯಕ್ರಮ-ಕಾರ್ಯಾಗಾರಗಳನ್ನು ನಡೆಸಿರುವ ರಮೇಶ್ ಈವರೆಗೆ 4.85 ಲಕ್ಷ ಮಕ್ಕಳಿಗೆ, ಶಿಕ್ಷಕರಿಗೆ ತರಬೇತಿ ನೀಡಿದ್ದಾನೆ. ಅಷ್ಟು ಮಕ್ಕಳಲ್ಲಿ ಅವನಿಗೆ ಹನುಮಂತ ಕಂಡಿದ್ದಾನೆ. ರಮೇಶ್ ತರಬೇತಿ ನೀಡಿದಲ್ಲೆಲ್ಲ ಕಲಿಕಾ ಮಟ್ಟ ಉತ್ತಮಗೊಂಡಿದೆ, ಮಕ್ಕಳ ಹಾಜರಾತಿ ಹೆಚ್ಚಿದೆ. ಕೃಷಿಭೂಮಿಯಿಂದ ಬಂದ ತನ್ನ ಹಿನ್ನೆಲೆ ಮರೆಯಬಾರದು, ರೈತರ ಕಲ್ಯಾಣಕ್ಕಾಗಿ ಸಾಧ್ಯವಾದಷ್ಟು ಶ್ರಮಿಸಬೇಕು ಎಂದು ನಿರ್ಧರಿಸಿ ಕೋತಿಗುಡ್ಡದಲ್ಲಿ ಕೃಷಿಯನ್ನೂ ಮಾಡುತ್ತಿರುವ ರಮೇಶ್ ವರ್ಷದ 365 ದಿನಗಳಲ್ಲಿ 150 ದಿನ ಸಮಾಜಕ್ಕಾಗಿ, 100 ದಿನ ಬಿಪಿಒಗಾಗಿ, ಉಳಿದೆಲ್ಲ ದಿನಗಳನ್ನು ಕೃಷಿಗಾಗಿ ಮೀಸಲಿಟ್ಟಿದ್ದಾನೆ. ಈತನ ಸಾಧನೆಗೆ ಸಿಎನ್​ನ್-ಐಬಿಎನ್​ನ ರಿಯಲ್ ಹೀರೋ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ.
ಯಶಸ್ಸು ಸುಮ್ಮನೆ ಸಿಗುವುದಿಲ್ಲ, ಅದಕ್ಕೆ ಶಾರ್ಟ್​ಕಟ್ ಮಾರ್ಗವೂ ಇಲ್ಲ. ಬದ್ಧತೆ ಮತ್ತು ಕಠಿಣ ಪರಿಶ್ರಮಗಳು ಬೇಕು ಎನ್ನುವ ರಮೇಶ್- ‘ಇಂಗ್ಲಿಷ್-ಕಂಪ್ಯೂಟರ್ ಕಲಿಯುವಾಗ ದಿನದ 20 ಗಂಟೆ ಅಭ್ಯಾಸ ಮಾಡಿದ್ದೇನೆ’ ಎಂದು ನೆನಪಿಸಿಕೊಳ್ಳುತ್ತಾನೆ. ಗದ್ದೆಯಲ್ಲಿ ನಿಂತು ಆಕಾಶದಲ್ಲಿ ಹೋಗುತ್ತಿದ್ದ
ವಿಮಾನವನ್ನು ಕಂಡು ಸಂಭ್ರಮಿಸುತ್ತಿದ್ದ ರಮೇಶ್ ಈಗ ಅದೇ ವಿಮಾನಗಳಲ್ಲಿ ಬಿಡುವಿಲ್ಲದ ಪ್ರವಾಸ ಕೈಗೊಳ್ಳುತ್ತಿದ್ದಾನೆ. ದೊಡ್ಡ ಸಂಸ್ಥೆ, ಕಟ್ಟಡ ಯಾವುದು ಕಟ್ಟದೆಯೂ ಲಕ್ಷಾಂತರ ಜನರಿಗೆ ಶಿಕ್ಷಣ ನೀಡಬಹುದು ಎಂಬುದನ್ನು ತೋರಿಸಿಕೊಟ್ಟಿರುವ ರಮೇಶ್ ಬಲ್ಲಿದ್ ನಮ್ಮ ನಾಡಿನ ಶಿಕ್ಷಣದ, ಗ್ರಾಮಶಕ್ತಿಯ ಅದಕ್ಕಿಂತಲೂ ಹೆಚ್ಚಾಗಿ ಪ್ರೇರಣೆಯ ರಾಯಭಾರಿಯಾಗಿದ್ದಾರೆ.
ಇಂಥ ಸಾಧನೆ ನಮ್ಮ ಕಣ್ಣು ತೆರೆಸಿದರೆ ಮತ್ತೆ ಸಾವಿರ ಸಾವಿರ ರಮೇಶ್ ಬಲ್ಲಿದ್​ರು (98802-49175) ಸಿಗಬಹುದೇನೋ? ಒಮ್ಮೆ ನಮ್ಮ ಹಳ್ಳಿ-ಓಣಿಯಲ್ಲೂ ದೃಷ್ಟಿ ಹಾಯಿಸೋಣ, ಅಲ್ಲವೇ?

Saturday, November 10, 2018

ರೈತರೆ ಸ್ವಲ್ಪ ಎಚ್ಚೆತ್ತುಕೊಳ್ಳಿ.

           

   

                  ರೈತರೆ ಸ್ವಲ್ಪ ಎಚ್ಚೆತ್ತುಕೊಳ್ಳಿ. 

                                      - ಬಸವರಾಜ ಉಮಲೂಟಿ 

ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ರೈತರು  ತಮಗಾಗುತ್ತಿರುವ ಮೋಸ ವನ್ನು ಸಹ ಅರಿಯದ ಮುಗ್ಧರು, ನಮ್ಮ ಈ ಭಾಗದ ರೈತರಿಗೆ ನಾನಾ ಮೂಲಗಳಿಂದ ತೊಂದರೆಗಳು ಆಗುತ್ತಾ ಇವೆ ಅವುಗಳ ಅನಾವರಣವನ್ನೆ ಇಲ್ಲಿ ಮಾಡಲಿದ್ದೇನೆ. 

ಹೌದು, ಮೊದಲಿನಿಂದಲೂ ರೈತನಿಗೆ ಅಷ್ಟ ದಿಕ್ಕುಗಳಿಂದಲೂ ಮೋಸ ಆಗುತ್ತಲೆ ಬಂದಿದೆ ಅದು ಸರ್ಕಾರದ ಸೌಲಭ್ಯಗಳಲ್ಲಿ, ಬೆಲೆಗಳಲ್ಲಿ, ತೂಕಗಳಲ್ಲಿನ ವ್ಯತ್ಯಾಸ, ದಲ್ಲಾಳಿಗಳ ದಲ್ಲಾಳಿತನಕ ರೈತರಿಗೆ ಅನ್ಯಾಯವಾಗುತ್ತಿರುವುದು ಸಾಮಾನ್ಯವಾಗಿತ್ತು ಆದರೆ ಇತ್ತೀಚೀನ ದಿನಮಾನಗಳಲ್ಲಿ ರೈತರಿಗೆ ಒದಗಿಸುವ ನೀರಿನಲ್ಲೂ ಸಹ ಅನ್ಯಾಯ ಆಗುತ್ತಿದೆ. 
 ಅದು ಹೇಗೂ ಒಂದು ಬೆಳೆಗಳಿಗೆ ನೀರು ಪಡೆದುಕೊಂಡು ಬಿಸಿಲೆನ್ನದೆ ಮಳೆಯನ್ನದೆ ಆರೇಳು ತಿಂಗಳಲ್ಲಿ ಕಡಿಮೆ ದರದಲ್ಲಿ  ಸರ್ಕಾರದಿಂದ ಸಿಗಬೇಕಾದ ರಸಗೊಬ್ಬರ, ಕ್ರಿಮಿನಾಶಕಗಳು ಸಿಗದೆ ಫರ್ಟಿಲೈಜರ್ ಕಂಪನಿಗಳು ನೀಡುವ ರಸಗೊಬ್ಬರ, ಕೀಟನಾಶಕಗಳನ್ನ ಅದೇಗೊ ಸಾಲ ಮಾಡಿ ಸಾವಿರಾರು ರೂ ಗಳನ್ನ ಕೊಟ್ಟು ತಂದು ಸಿಂಪಡಿಸಿ ಬೆಳೆ 🌾 ತೆಗೆದುಕೊಂಡ ಮೇಲೆ ಶುರುವಾಗುತ್ತೆ ದಲ್ಲಾಳಿಗಳ ಕಾಟ, ಸೂಕ್ತ ಬೆಂಬಲ ಬೆಲೆ ಇಲ್ಲದೆ ಇರುವಾಗ ಅನೈತಿಕವಾಗಿ ಹೆಚ್ಚೆಚ್ಚು ಕಮಿಷನ್ ಪಡೆದು ರೈತರನ್ನ ಇನ್ನಷ್ಟು ನಷ್ಟಕ್ಕೆ ನೂಕುವ ಕೆಲಸ ಇತ್ತಿಚೀನ ದಿನಮಾನಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. 

ಇದು ಒಂದು ದುರಂತವಾದರೆ ಇನ್ನೊಂದು ಬಹುದೊಡ್ಡ ಕಂಟಕವೇನಂದರೆ ನಮ್ಮ ರೈತರ ನಿರ್ಲಕ್ಷ್ಯತನ ಅಂದರೆ ತಪ್ಪಾಗಲಿಕ್ಕಿಲ್ಲ. ನಮ್ಮ ಭಾಗದ ರೈತರಿಗೆ ತುಂಗಭದ್ರಾ ಡ್ಯಾಂ, ಡ್ಯಾಂನ ಸಂಗ್ರಹ, ಹೋರಾಟಗಳು ನೆನಪಾಗೋದು ಈ ಬೆಳೆಗೆ ನೀರಿಲ್ಲವೆಂದಾಗ ಮಾತ್ರ.ಆ  ಹೋರಾಟಗಳು ಸಹ ಕ್ಷಣಿಕ ಮಾತ್ರ. ತಾತ್ಕಾಲಿಕ ಪರಿಹಾರಕ್ಕಾಗಿ ಹೋರಾಡುವ ನಮ್ಮ ರೈತರು ಶಾಶ್ವತ ಪರಿಹಾರದ ಆಲೋಚನೆ ತಲೆಯಲ್ಲಿ ಇದ್ರು ಹೋರಾಟವಾಗಿ ಪರಿವರ್ತನೆ ಮಾಡಿಕೊಂಡು ಕೆಲಸ ಮಾಡಿಸಿಕೊಳ್ಳಲು ವಿಫಲರಾಗುತ್ತಿದ್ದಾರೆ. ಯೋಚನೆ, ಆಲೋಚನೆಗಳಲ್ಲಾ  ಬರೀ ಊರ ಕಟ್ಟೆಗೆ ಸೀಮೀತವಾಗುತ್ತಿವೆ. ಅಷ್ಟಕ್ಕೂ ಶಾಶ್ವತ ಪರಿಹಾರ ಏನು, ಆ ಯೋಚನೆ ಏನೆಂದರೆ ಈಗಾಗಲೇ ಡ್ಯಾಂ ನಲ್ಲಿ ತುಂಬಿರುವ ಹೂಳು ತೆಗೆಯುವುದು. ಡ್ಯಾಂ ನಲ್ಲಿ ತುಂಬಿಕೊಂಡಿರುವ ಹೂಳು ರೈತರಿಗೆ ಅತಿದೊಡ್ಡ ಸಮಸ್ಯೆಯಾಗಿದ್ರು ಅದು ನಮ್ಮ ರೈತರಿಗೆ ತಿಳಿಯುತ್ತಿಲ್ಲ ಅನ್ನೋದು ವಿಷಾದನೀಯ ಸಂಗತಿ. ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬಂದರು ಹೂಳು ತುಂಬಿರುವ ಕಾರಣ ಹೆಚ್ಚು ಸಂಗ್ರಹಿಸಲಾಗಿದೆ ಹೊರಬಿಡಲಾಗುತ್ತದೆ. ಸದ್ಯ ಇರುವ ಸಂಗ್ರಹದ ಸಾಮರ್ಥ್ಯ ಒಂದು ಬೆಳೆಗೆ ಸರಿಯಾಗುತ್ತಿದೆ, ಒಂದು ವೇಳೆ ಹೂಳು ತೆಗದೆರೆ ಸರಾಗವಾಗಿ ಸುಖವಾಗಿ ರೈತ ಎರಡನೇ ಬೆಳೆ ಬೆಳೆದು ಕೊಳ್ಳಬಹುದು. 

ಹೂಳು ತೆಗೆಯುವ ಯೋಜನೆ ಅತ್ಯಂತ ಕ್ಲಿಷ್ಟಕರವಾದದ್ದು ಆದ ಕಾರಣ 
ಹೂಳು ತೆಗೆಯಲಕ್ಕಿ ಆಗಲಿಲ್ಲವಾದರು, ಜಲಾಶಯಕ್ಕೆ ಸಮನಾಂತರವಾಗಿ ಇನ್ನೊಂದು ಜಲಾಶಯ ನಿರ್ಮಾಣ ಮಾಡುವ ಮೂಲಕವಾದರು ರೈತರ ಶಾಸ್ವತ ಸಂತೋಷಕ್ಕಾಗಿ  ರಾಜ್ಯ ಸರ್ಕಾರ ಯೋಚಿಸಲಿ ರೈತರ ಏಳ್ಗೆಯನ್ನ ಕಾಯಲಿ.


ಈಗಲಾದರೂ ಓ ರೈತರೆ ಎಚ್ಚೆತ್ತುಕೊಳ್ಳಿ ನಿಮ್ಮ ಭವಿಷ್ಯ ಉಜ್ವಲವಾಗಲಿದೆ ಇಲ್ಲವಾದರೆ ನಿಮ್ಮ ವಿನಾಶ ನಿಮ್ಮ ಕೈಯಿಂದ ಆಗಲಿದೆ. 
                        ಜೈಹೋ ರೈತ 

Saturday, August 4, 2018

ಸ್ನೇಹಬಂಧ

     
 

ಸ್ನೇಹಬಂಧ

                                 - ಬಸವರಾಜ ಉಮಲೂಟಿ


ಓ ಗೆಳೆಯ ಗೆಳತಿಯರೆ, 
ಈ ದಿನ ನಮ್ಮ ದಿನ, 
ನಮ್ಮೆಲರ ಬಾಂಧವ್ಯ ಸಾರುವ ದಿನ. 

ಜೊತೆ ಜೊತೆಗೆ ಗೋಲಿ, ಲಗೋರಿ, 
ಆಡಿದವರ ಸ್ಮರಿಸುವ ಹೊತ್ತು, 
ಕ್ಲಾಸಿಗೆ ಚಕ್ಕರ್ ಹಾಕಿ ಹಿಂದೆ ಬಂದರು ಆವತ್ತು, 
ಅವರೆಲ್ಲರನ್ನ ಮೆಲುಕು ಹಾಕುವ ಘಳಿಗೆ ಬಂದಿದೆ ಇವತ್ತು. 

ಲಗೋರಿ ಆಟಗಳು, 
ಫೇಸ್ಬುಕ್ ಚಾಟ್ ಗಳು, 
ಇವೆಲ್ಲವೂ ಕೂಡಿಸಿದವು, 
ಗೆಳೆಯರ ಬಳಗವು. 

ನಮ್ಮ ಈ ಸ್ನೇಹಲೋಕವು 
ಬೆಳಗಲಿ ಜಗದ ಲೋಕಕೆ, 
ಅಮರವಾಗಲಿ ನಮ್ಮ ಸ್ನೇಹದ  ಕುರುಹುಗಳು. 

ನನ್ನೆಲ್ಲಾ ಸ್ನೇಹವೃಂದಕ್ಕೆ ಸ್ನೇಹ ದಿನಾಚರಣೆಯ ಶುಭಾಶಯಗಳು 💐 🎉

Sunday, July 22, 2018

ವಿದ್ಯಾರ್ಥಿ ಸಂಘಟನೆಗಳೆ ವಿದ್ಯಾರ್ಥಿಗಳಿಗೆ ಮುಳುವಾಗುತ್ತಿದ್ದಾವ?

ವಿದ್ಯಾರ್ಥಿ ಸಂಘಟನೆಗಳೆ ವಿದ್ಯಾರ್ಥಿಗಳಿಗೆ ಮುಳುವಾಗುತ್ತಿದ್ದಾವ?

ಹೌದು,ಈ ಒಂದು ಪ್ರಶ್ನೆ ಎಲ್ಲರಲ್ಲೂ ಸಹಜವಾಗಿ ಮೂಡುವಂತದ್ದೆ. ಯಾವುದೇ ಸಂಘಟನೆಗಳಾಗಲಿ (ABVP, NSUI,AIDSO etc) ಅವುಗಳ ಉದ್ದೇಶ, ಸಿದ್ದಾಂತಗಳು ವಿದ್ಯಾರ್ಥಿಗಳ ಪರವಾಗಿಯೆ ಇರಬಹುದು ಆದರೆ ಇವುಗಳಲ್ಲಿನ ಇರುಸು ಮುರುಸು,ಒಗ್ಗಟ್ಟಿನ ಕೊರತೆ,ವಿವಿಧ ರೂಪದ ಸಂಘಟನಾತ್ಮಕ ಹೋರಾಟಗಳು ವಿದ್ಯಾರ್ಥಿಗಳನ್ನ ಗೊಂದಲಕ್ಕೆ ದೂಡುತ್ತಿವೆ.

ಇವುಗಳಲ್ಲಿ ನಡೆಯುತ್ತಾದರು ಏನು ಅಂದರೆ ಇವುಗಳ ಒಗ್ಗಟ್ಟಿನ ಕೊರತೆಯಿಂದ, ಯಾವುದೇ ಒಂದು ವಿದ್ಯಾರ್ಥಿಗಳ ತೊಂದರೆ ಮೇಲಿನ ಹೋರಾಟಗಳು ಅನೇಕ ಸಂಘಟನೆಗಳಿಂದ  ವಿವಿಧ ರೀತಿಯಲ್ಲಿ ವಿವಿಧ ದಿನಗಳಲ್ಲಿ ನಡೆಸುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುತ್ತದೆ.

ಇತ್ತೀಚಿಗೆ ಉಚಿತ ಬಸ್ ಪಾಸ್ ವಿತರಣೆ ವಿಚಾರದಲ್ಲಿ ಎಡವಿದ ಸರ್ಕಾರಕ್ಕೆ ಬಿಸಿ ಮುಟ್ಟಿಸಲೆಂದು ಅನೇಕ ವಿದ್ಯಾರ್ಥಿ ಸಂಘಟನೆಗಳು ಹೋರಾಟ ಮಾಡಿ ಮನವಿ ಕೂಡ ಸಲ್ಲಿಸದರು ಇದರಲ್ಲೇನು ಅಭ್ಯಂತರವಿಲ್ಲ ಆದರೆ ಅನೇಕ ಸಂಘಟನೆಗಳು ದಿನಕ್ಕೊಂದರಂತೆ ಹೋರಾಟ ನಡೆಸಿವೆ. ಹೀಗೆ ದಿನಕ್ಕೊಬ್ಬರಂತೆ ಶಾಲಾ ಕಾಲೇಜ್ ಬಂದ್ ಮಾಡಿಸಿ ಹೋರಾಟದ ಮೂಲ ಆದ ವಿದ್ಯಾರ್ಥಿಗಳನ್ನ ಹೋರಾಟಕ್ಕೆ ಕರೆದೊಯ್ಯುದರಿಂದ ವಿದ್ಯಾರ್ಥಿಗಳ ತರಗತಿಗಳು ಹಾಳಾಗುವುದರಿಂದ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುತ್ತಿದೆ..

ಎಲ್ಲಾ ಸಂಘಟನೆಗಳು ವಿದ್ಯಾರ್ಥಿಗಳ ಪರನೆ ಇವೆ ಆದರೆ ನಿಮ್ಮಲ್ಲಿನ ಒಗ್ಗಟ್ಟಿನ ಶಕ್ತಿಯ ಕೊರತೆ ಕಾಡುತ್ತಿದೆ. ನಿಮ್ಮ ಒಗ್ಗಟ್ಟಿನ ಮಂತ್ರ ವಿದ್ಯಾರ್ಥಿಗಳ ಕೂಗನ್ನ ಹೆಚ್ಚಿಸಿ, ಸಮಸ್ಯೆಗಳಿಗೆ ಪರಿಹಾರ ಕೊಡಿಸಬಲ್ಲದು, ಎಂಬುವುದು ಒಬ್ಬ ವಿದ್ಯಾರ್ಥಿಯಾಗಿ ನನ್ನ ಆಶಯ.    
                 -ಯು ಬಸವರಾಜ

Monday, June 4, 2018

ಮಾಸ್ತಾರ ಮಂಜುನಾಥ


      

                  

                  ಮಾಸ್ತಾರ ಮಂಜುನಾಥ 


                                     - ಬಸವರಾಜ ಉಮಲೂಟಿ 

   ಅಮಾಯಕನು ನೀನು,                                                ಮುಗ್ಧಜೀವಿಯೂ ನೀನು,                                            ಅಂತ ಅಂದುಕೊಂಡಿದ್ದೆ ನಾನು,                                  ಆದರೆ ಗೊತ್ತಾಯ್ತು ನೀ,                                              ಪಾಪ ಹುಡುಗರನ್ನ                                                      ರೂಮಲ್ಲಿ ಹಾಕಿ                                                          ಪಾಠವ ಭೋಧಿಸಿ  ಓದು ಓದು ಎನ್ನುವಾಗ,                  ನೀನೊಬ್ಬ ಖಡಕ್ ಮಾಸ್ತಾರ ಎಂದು. 


   ಮತ್ತೆ ಆಮೇಲೆ ಗೊತ್ತಾಯ್ತು ನೀ ನಿನ್ನ,                          ವಿದ್ಯಾರ್ಥಿಗಳ ವಿದ್ಯಾರ್ಥಿ ಎಂದು,                                ಸಹಪಾಠಿಗಳ ಆದರ್ಶವೆಂದು,                                      ಗೆಳೆಯರ ಸಹ್ರದಯಿ ಎಂದು,                                      ಕುಟುಂಬದ ಹೊಳೆಯುವ ವಜ್ರವೆಂದು,                        ನಾ ನಿನ್ನ ಮನಸಾರೆ ಕರೆಯುವೆ ಮಂಜಪ್ಪಣ್ಣನೆಂದು. 

  

   ಈ ದಿನ ಜನ್ಮದಿನದ ಸಂಭ್ರಮದಲ್ಲಿರುವ                         ನಿನಗೆ ನಾ ತಿಳಿಸುವೆ,                                                  "ಹುಟ್ಟು ಹಬ್ಬದ ಶುಭಾಶಯಗಳು" 💐 🎂 ಎಂದು         ನೂರಾರು ವರ್ಷ ಸುಖಕರವಾಗಿ,                                 ಚಿರಕಾಲವಾಗಿ, ಜನಸ್ನೇಹಿಯಾಗಿ                                 ಬಾಳು ನೀ ಎಂದೆದೂ. 🎉 💐         

                                                    

Tuesday, February 13, 2018

ಹಂಪನಗೌಡ್ರು (ನಮ್ಮ ಸಿಂಧನೂರು ಎಂಎಲ್ಎ)

             ಹಂಪನಗೌಡ್ರು

                          ( ನಮ್ಮ ಸಿಂಧನೂರು ಎಂಎಲ್ಎ) 

   
                                  - ಬಸವರಾಜ ಉಮಲೂಟಿ 
                                        ಸಾ|| ಕೆ.ಹಂಚಿನಾಳ

        ನಮ್ಮ ಊರು ಸಿಂಧನೂರು, 
        ಸೋನಮಸೂರು ಸೂರು ಈ ಊರು. ||ಪ||

        ನಮ್ಮೆಲ್ಲರ ಸಾಹೇಬ್ರು ಹಂಪನಗೌಡ್ರು, 
        ಗೌಡರ ಕನಸಿನ ಕೂಸು ಸಿಂಧನೂರು, 
        ನಾಲ್ಕು ಬಾರಿ ಆದರು ಶಾಸಕರು, 
        ಅಭಿವ್ರದ್ಧಿ ಮಾಡಿದ್ರು ಸಿಂಧನೂರು. ||೧||

        ನಮ್ಮ ಭತ್ತ ಸೂಪರ್ರೋ  ಸೂಪರ್ 👌, 
        ಟ್ರಾಕ್ಟರ್ ಮಾರಾಟದಲ್ಲಿ ನಂಬರ್ ಒನ್, 
       ತಾಲೂಕ ಅಂದ್ರೆ ಸಿಂಧನೂರು ಅಂದ್ರು ಗೂಗಲ್ನವ್ರು
       ಇದಕ್ಕೆಲ್ಲ ಕಾರಣೀಭೂತರು ನಮ್                                                           ಹಂಪನಗೌಡ್ರು.   ||೨||



       ಚಿಹ್ನೆ ಬದಲಿಸಿದರು ಇಳಿಯಲಿಲ್ಲ ಖದರ್, 
       ಖುರ್ಚಿ ಹಿಂದೆ ಬೀಳದೆ ಜನರ ಅಭಿವೃದ್ಧಿ
                                                      ಮಾಡಿದರು, 
       65 ರ ಇಳಿವಯಸ್ಸಿನಲ್ಲೂ 35ರ ಯುವಕನಂತೆ     
                                                        ಓಡಾಟ, 
       25ರ ಯುವ ಮನಸ್ಸಿನಂತೆ ತುಡಿತ. ||೩||



      ಸಿಂಧನೂರೆ ಕುಟುಂಬ ಎಂದರು, 
     ಸಿಂಧನೂರಿನ ಜನತೆನೆ ಕುಟುಂಬಸ್ಥರೆಂದರು, 
    ಸಿಂಧನೂರ ಜನರ ಹಿರಿಮೆ, ಗರಿಮೆ, 
   ನಮ್ಮೆಲ್ಲರ ಹೆಮ್ಮೆಯ ಕಿರೀಟ ಹಂಪನಗೌಡ್ರು. ||೪||

         

Thursday, January 18, 2018

ಹಳ್ಳಿಕಟ್ಟೆ

ಹಳ್ಳಿಕಟ್ಟೆ 
              (ಕಟ್ಟೆವಾಲಗಳು, ಗಂಜಿವಾಲಗಳು)       



ಬಿಳಿ ಅಂಗಿ, ಬಿಳಿ ಪಂಚೆ.
ಅದರ ಜೊತೆಗೆ ಖಡಕ್ ಗಂಜಿ,
ಖಡಕ್ ಖಡಕ್ ಸುದ್ದಿಯೊಂದಿಗೆ,
ಮಾತಾಡುತ ಕಟ್ಟೆಗೆ ಕುಳಿತಿರುವರು,
ಕಟ್ಟೆವಾಲಗಳು ಅವರೆ ಕಟ್ಟೆವಾಲಗಳು! ||೧||


ಶಿಸ್ತು, ಸಮಯಪಾಲನೆಯ ರೂವಾರಿಗಳು.
ಮಧ್ಯಾಹ್ನಕ್ಕೊಂದು ಸ್ಟ್ರಾಂಗ್, ಟೀ, ಬೀಡಿ, ಸಿಗರೇಟ್ ಗಳು.
ಊರ ವಿಮರ್ಶಕರು, ಚಿಂತಕರು, ಏಳ್ಗೈಯ್ಯುವವರು.
ವೇದಿಕೆ ಹಿಂದಿನ ಖ್ಯಾತ ವಾಗ್ಮಿಗಳು ಅವರೆ ಕಟ್ಟೆವಾಲಗಳು. ||೨||


ರಾಜಕೀಯ ವಿಶ್ಲೇಷಣೆಗಳು,
ಊರ ಓಣಿಯ ಸುದ್ದಿಗಳು,
ಯಾವ ಯಾವ ವಾಚಕರಿಗೂ,
ಕಡಿಮೆಯಿರದ ಒಬ್ಬೊಬ್ಬರ ಸ್ಪೀಚುಗಳು,
ಗಂಜಿವಾಲಗಳು ಅವರೆ ಕಟ್ಟೆವಾಲಗಳು ||೩||



ಉದ್ದಾರವಾದವನನ್ನ ಹೊಗಳುವರು,
ಹಳ್ಳ ಹಿಡಿದವನ ನೂಕುವರು,
ಸಮಯಕ್ಕೆ ತಕ್ಕಂತೆ ಬಕೆಟ್ ಹಿಡಿಯುವವರು,
ನೇರ ನುಡಿ, ನೇರ ಮಾತು ಸಹಿಸಿಕೊಳ್ಳದವರು,
ಆದರೆ ಏನೆ ಹೇಳಿ ಇವರೆ ಜೀವನದ ಮಾರ್ಗದರ್ಶಕರು,
ಅವರೆ ಹಳ್ಳಿ ಕಟ್ಟೆವಾಲಗಳು, ಗಂಜಿವಾಲಗಳು, ಬರ್ನಿಂಗ್ ಬ್ರೆಡ್ ಗಳು ||೪||

        - ಬಸವರಾಜ ಉಮಲೂಟಿ (ಯು.ಬಿ)
     ಮೊ:೯೯೧೬೪೦೩೪೧೯
     ಕೆ.ಹಂಚಿನಾಳ
     ಸಿಂಧನೂರು
     ರಾಯಚೂರು.

Tuesday, January 9, 2018

ಭತ್ತದ ಪೈರಿಗೆ ರೈತನ ಕಣ್ಣೀರು

                 ಭತ್ತದ ಪೈರಿಗೆ ರೈತನ ಕಣ್ಣೀರು 
                              (ತುಂಗಭದ್ರಾ ಒಡಲಿನ ರೈತನ ವ್ಯಥೆ)                          
                                      - ಬಸವರಾಜ ಉಮಲೂಟಿ    
                    ರೈತ ದೇಶದ ಬೆನ್ನೆಲುಬು, ರೈತನಿಲ್ಲದೆ ನಾವಿಲ್ಲ ಎಂದು ಬೊಗಳೆ ಬಿಡುತ್ತಾ ತಮ್ಮ ಬಕೆಟ್ ಹಿಡಿಯುತ್ತಿದ್ದಾರೆ ಹೊರತು ರೈತರಿಗೆ ಕಿಂತಿಷ್ಟು ಮಾಡಿಲ್ಲ. ಸದಾ ರೈತರ ಹೆಸರು ಹೇಳಿಕೊಂಡು ರಾಜಕೀಯ ಮಾಡ್ತಾ ಇದ್ದಾರೆ ಹೊರತು ರೈತಪರ, ರೈತ ಕಾಳಜಿಯುಳ್ಳ ಕಾರ್ಯಕ್ರಮಗಳು ಹೊರಬಂದಿಲ್ಲ,ಇನ್ನೂ ಬಜೆಟ್ ಕ್ರಷಿಗೆ ಅಷ್ಟು ಇಷ್ಟ ಅಂತ ಹೇಳಿ ಒಟ್ಟಾರೆ ಕೋಟಿಗಟ್ಟಲೆ ಕೊಡ್ತಾರೆ ಆದರೆ ಅವು ಬರಿ ಪೇಪರ್ ಗಳಿಗೆ ಮಾತ್ರ ಸೀಮೀತವಾಗಿವೆ ಅಪ್ಪಿತಪ್ಪಿ ಒಂದಿಷ್ಟು ದುಡ್ಡು ಬಂದರೂ ಅರ್ಧ ರಾಜಕಾರಣಿಗಳ ಜೇಬಿಗೆ ಇನ್ನರ್ಧ ಅಧಿಕಾರಿಗಳ ಹೆಂಡತಿ ಮಕ್ಕಳಿಗೆ.

                      ಸಾವಿರಾರು ಕೋಟಿ ಸಾಲ ತಗೆದುಕೊಂಡವರಿಗೆ ಮಾಫಿಯಾ ಭಾಗ್ಯ ಸಾವಿರ ರೂಪಾಯಿ ಸಾಲ ತಗೊಂಡ ರೈತನಿಗೆ ಮಾತ್ರ ಸಾವಿನ ಭಾಗ್ಯ ಅಂತಾಗಿದೆ. ಇನ್ನೂ ಈ ರಾಜಕಾರಣಿಗಳ ತೆವಲು ಇಲ್ಲಿಗೆ ಬಿಟ್ಟೀತೆ ರೈತನ ಸಾವಿನಲ್ಲೂ ತಮ್ಮ ವೋಟ್ ಬ್ಯಾಂಕ್ ಸಲುವಾಗಿ ವೋಟ್ ಬ್ಯಾಂಕ್ ರಾಜಕಾರಣ.ರೈತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡೋದು ಹೇಳಿದ್ ಕೆಲಸ ಮಾಡದೆ ವಚನಭ್ರಷ್ಟ ರಾಗಿ ರೈತರ ಸಾವಿಗೆ ಕಾರಣರಾಗೋದು.ನಿಜವಾಗ್ಲು  ರೈತನಿಗೆ ಯಾವುದೆ ರೀತಿಯ ಸಾಲ ಮನ್ನಾದ ಅವಶ್ಯಕತೆನೆ ಇಲ್ಲ, ರೈತನಿಗೆ ಸೂಕ್ತ ಸಮಯಕ್ಕೆ ಸರಿಯಾದ ಮಟ್ಟದಲ್ಲಿ ನೀರು, ಧಾನ್ಯಕ್ಕೆ ತಕ್ಕ ಬೆಂಬಲ ಬೆಲೆ ಕೊಟ್ಟರೆ ರೈತರೆ ಸರ್ಕಾರಕ್ಕೆ ಸಾಲ ಕೊಡುವಂತರಾಗುತ್ತಾರೆ.
               ಇನ್ನೂ ನೀರು ಎಂದ ತಕ್ಷಣ ನೆನಪಾಯಿತು ನಮ್ಮ ರಾಜ್ಯದ ರೈತರಿಗೆ ನೀರಿನಲ್ಲಿ ಅನೇಕ ತರಹದ ವಂಚನೆ ನಡೀತಾನೆ ಬಂದಿದೆ ಕಾವೇರಿ ಹೆಸರಲ್ಲಿ ತಮಿಳುನಾಡಿನಿಂದ ಮೋಸ, ಮಹಾದಾಯಿ ಎನ್ನೋ ತಾಯಿಯ ಮಕ್ಕಳಿಗೆ(ರೈತರಿಗೆ) ಗೋವಾ, ಮಹಾರಾಷ್ಟ್ರ ದಿಂದ ವಂಚನೆ
ನಡೀತಾನೆ ಇದೆ ನಮ್ಮ ರೈತರ ಮೇಲೆ.
                     ಇನ್ನೂ ಇವು ಬೇರೆ ರಾಜ್ಯದಿಂದ ವಂಚನೆ ಆದರೆ ನಮ್ಮ ರಾಜ್ಯದಲ್ಲಿ ನಮ್ಮವರಿಂದ ನಮ್ಮ ರೈತರಿಗೆ ಮೋಸ ನಡೀತಿದೆ. ಇದಕ್ಕೆ ಸೂಕ್ತ ಉದಾಹರಣೆ ಅಂದರೆ ತುಂಗಭದ್ರಾ ಒಡಲಿನ ಎಡದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೆಳೆಗೆ ನೀರು ನೀಡದೆ ಮಾಡುತ್ತಿರುವ ಅನ್ಯಾಯ . ಡ್ಯಾಂ ನಲ್ಲಿ 35 ಟಿಎಂಸಿ ಹೂಳು ತುಂಬಿದೆ ಇದನ್ನು ತೆಗೆಯಲು  ಯಾವುದೆ ಸರ್ಕಾರ ಕೂಡ ಮುಂದೆ ಬರ್ತಾ ಇಲ್ಲ. ಈ ಹೂಳು ತೆಗದರೆ ರೈತರು ನಿಶ್ಚಿಂತೆಯಿಂದ ವರ್ಷಕ್ಕೆ ಎರಡು ಫಸಲನ್ನ ತೆಗೆದುಕೊಳ್ಳಬಹುದು. ಈ ಭಾಗದ ರೈತರಿಗೆ ಈ ಒಂದು ಸಮಸ್ಯೆ ಆದರೆ ಇನ್ನೊಂದು ಭೀಕರ ಸಮಸ್ಯೆ ಕಾಡುತಿದೆ. ಅದೇನಂದರೆ ರಾಜಕೀಯದವರ ಆಟದಿಂದ ಬೇಕಾದ ಕಾರ್ಖಾನೆಗಳಿಗೆ ಸದ್ದಿಲ್ಲದೆ ಸರಾಗವಾಗಿ ಸಾಗುತಿದೆ ತುಂಗೆಯ ಒಡಲು. ಹೊಸಪೇಟೆ ಸುತ್ತ ಮುತ್ತಲಿನ ಫ್ಯಾಕ್ಟರಿ ಗಳಿಗೆ ತುಂಗೆ ಸೋರಿ ಹೋಗುತಾ ಇದ್ದಾಳೆ ಈಕಡೆ ರಾಜಕಾರಣಿಗಳ ಜೇಬು ತುಂಬುತ್ತಿದೆ.
                   ಒಟ್ಟಾರೆ ರಾಜಕೀಯದವರ ಡೊಂಬರಾಟದಿಂದ ರೈತರಿಗೆ ಸೂಕ್ತವಾಗಿ ಸರಿಯಾದ ಕ್ರಮದಲ್ಲಿ ನೀರು ಸಿಗದೆ ವರ್ಷಕ್ಕೆ ಒಂದೂ ಬೆಳೆಯನ್ನ ಬೆಳೆಯಲಿಕ್ಕೆ ಕ್ಲಿಷ್ಟಕರವಾಗಿದೆ. ಈ ವರ್ಷ ಮೊದಲನೆ ಬೆಳೆಗೆ  ನೀರಿದ್ದರು ಬಿಡದೆ ಸತಾಯಿಸಿ ಒಂದು ತಿಂಗಳ ತಡವಾಗಿ ನೀರು ಕೊಟ್ಟು ರೈತರನ್ನ ಗೊಂದಲಕ್ಕೆ ನೂಕಿದ್ದರು.ಎರಡನೇ ಬೆಳೆಗೆ ರೈತ ಸಸಿಮಡಿ ಹಾಕಿ ಪೂರ್ವಸಿದ್ಧತೆ ಮಾಡಿಕೊಂಡು ಕೂತಾಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹಾಗೆ ಕೇವಲ 60 ದಿನ ಆನ್ ಆ್ಯಂಡ್ ಅಫ್ ಸಿಸ್ಟಮ್ ಮೂಲಕ ಕಾಲುವೆಗೆ ನೀರು ಹರಿಸುವುದಾಗಿ ಹೇಳಿ ಅಡ್ಡಗೋಡೆ ಮೇಲೆ ದೀಪ ಇಟ್ಟು ರೈತ ಬೆಳೆ ಬೆಳೆಯಲೊ ಬೇಡವೊ 60 ದಿನದಲ್ಲಿ ಬೆಳೆ ಕೈಗೆ ಸಿಗುವುದೆ? ಎನ್ನುವ ಕನ್ಫ್ಯೂಸಿಂಗ್ ನಲ್ಲಿ  ರೈತ ಚಿಂತಿಸುತ್ತಿದ್ದಾನೆ. ಆದರೂ ನಮ್ಮ ಭಾಗದ ರೈತರು ಗಟ್ಟಿ ಗುಂಡಿಗೆಯಿಂದ ನಾಟಿ ಮಾಡುತ್ತಾ ಇದ್ದಾರೆ, ಈ ರಾಜಕಾರಣಿಗಳು ಮೋಸ ಮಾಡಬಹುದು ಆದರೆ ಭೂಮಿ ತಾಯಿ ಮೂರಪ್ಪತ್ತಿನ ಊಟಕ್ಕೆ ಮೋಸ ಮಾಡಲಾರಳು ಎಂದು ಭೂಮಿ ತಾಯಿ ನೆನೆಯುತ್ತಾ ಕ್ರಷಿ ಕಾರ್ಯದಲ್ಲಿ ತೊಡಗಿದ್ದಾರೆ ನಮ್ಮ ರೈತಾಪಿ ವರ್ಗ. 
                        ~;ಜೈಹೋ ರೈತ;~