Saturday, November 10, 2018

ರೈತರೆ ಸ್ವಲ್ಪ ಎಚ್ಚೆತ್ತುಕೊಳ್ಳಿ.

           

   

                  ರೈತರೆ ಸ್ವಲ್ಪ ಎಚ್ಚೆತ್ತುಕೊಳ್ಳಿ. 

                                      - ಬಸವರಾಜ ಉಮಲೂಟಿ 

ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ರೈತರು  ತಮಗಾಗುತ್ತಿರುವ ಮೋಸ ವನ್ನು ಸಹ ಅರಿಯದ ಮುಗ್ಧರು, ನಮ್ಮ ಈ ಭಾಗದ ರೈತರಿಗೆ ನಾನಾ ಮೂಲಗಳಿಂದ ತೊಂದರೆಗಳು ಆಗುತ್ತಾ ಇವೆ ಅವುಗಳ ಅನಾವರಣವನ್ನೆ ಇಲ್ಲಿ ಮಾಡಲಿದ್ದೇನೆ. 

ಹೌದು, ಮೊದಲಿನಿಂದಲೂ ರೈತನಿಗೆ ಅಷ್ಟ ದಿಕ್ಕುಗಳಿಂದಲೂ ಮೋಸ ಆಗುತ್ತಲೆ ಬಂದಿದೆ ಅದು ಸರ್ಕಾರದ ಸೌಲಭ್ಯಗಳಲ್ಲಿ, ಬೆಲೆಗಳಲ್ಲಿ, ತೂಕಗಳಲ್ಲಿನ ವ್ಯತ್ಯಾಸ, ದಲ್ಲಾಳಿಗಳ ದಲ್ಲಾಳಿತನಕ ರೈತರಿಗೆ ಅನ್ಯಾಯವಾಗುತ್ತಿರುವುದು ಸಾಮಾನ್ಯವಾಗಿತ್ತು ಆದರೆ ಇತ್ತೀಚೀನ ದಿನಮಾನಗಳಲ್ಲಿ ರೈತರಿಗೆ ಒದಗಿಸುವ ನೀರಿನಲ್ಲೂ ಸಹ ಅನ್ಯಾಯ ಆಗುತ್ತಿದೆ. 
 ಅದು ಹೇಗೂ ಒಂದು ಬೆಳೆಗಳಿಗೆ ನೀರು ಪಡೆದುಕೊಂಡು ಬಿಸಿಲೆನ್ನದೆ ಮಳೆಯನ್ನದೆ ಆರೇಳು ತಿಂಗಳಲ್ಲಿ ಕಡಿಮೆ ದರದಲ್ಲಿ  ಸರ್ಕಾರದಿಂದ ಸಿಗಬೇಕಾದ ರಸಗೊಬ್ಬರ, ಕ್ರಿಮಿನಾಶಕಗಳು ಸಿಗದೆ ಫರ್ಟಿಲೈಜರ್ ಕಂಪನಿಗಳು ನೀಡುವ ರಸಗೊಬ್ಬರ, ಕೀಟನಾಶಕಗಳನ್ನ ಅದೇಗೊ ಸಾಲ ಮಾಡಿ ಸಾವಿರಾರು ರೂ ಗಳನ್ನ ಕೊಟ್ಟು ತಂದು ಸಿಂಪಡಿಸಿ ಬೆಳೆ 🌾 ತೆಗೆದುಕೊಂಡ ಮೇಲೆ ಶುರುವಾಗುತ್ತೆ ದಲ್ಲಾಳಿಗಳ ಕಾಟ, ಸೂಕ್ತ ಬೆಂಬಲ ಬೆಲೆ ಇಲ್ಲದೆ ಇರುವಾಗ ಅನೈತಿಕವಾಗಿ ಹೆಚ್ಚೆಚ್ಚು ಕಮಿಷನ್ ಪಡೆದು ರೈತರನ್ನ ಇನ್ನಷ್ಟು ನಷ್ಟಕ್ಕೆ ನೂಕುವ ಕೆಲಸ ಇತ್ತಿಚೀನ ದಿನಮಾನಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. 

ಇದು ಒಂದು ದುರಂತವಾದರೆ ಇನ್ನೊಂದು ಬಹುದೊಡ್ಡ ಕಂಟಕವೇನಂದರೆ ನಮ್ಮ ರೈತರ ನಿರ್ಲಕ್ಷ್ಯತನ ಅಂದರೆ ತಪ್ಪಾಗಲಿಕ್ಕಿಲ್ಲ. ನಮ್ಮ ಭಾಗದ ರೈತರಿಗೆ ತುಂಗಭದ್ರಾ ಡ್ಯಾಂ, ಡ್ಯಾಂನ ಸಂಗ್ರಹ, ಹೋರಾಟಗಳು ನೆನಪಾಗೋದು ಈ ಬೆಳೆಗೆ ನೀರಿಲ್ಲವೆಂದಾಗ ಮಾತ್ರ.ಆ  ಹೋರಾಟಗಳು ಸಹ ಕ್ಷಣಿಕ ಮಾತ್ರ. ತಾತ್ಕಾಲಿಕ ಪರಿಹಾರಕ್ಕಾಗಿ ಹೋರಾಡುವ ನಮ್ಮ ರೈತರು ಶಾಶ್ವತ ಪರಿಹಾರದ ಆಲೋಚನೆ ತಲೆಯಲ್ಲಿ ಇದ್ರು ಹೋರಾಟವಾಗಿ ಪರಿವರ್ತನೆ ಮಾಡಿಕೊಂಡು ಕೆಲಸ ಮಾಡಿಸಿಕೊಳ್ಳಲು ವಿಫಲರಾಗುತ್ತಿದ್ದಾರೆ. ಯೋಚನೆ, ಆಲೋಚನೆಗಳಲ್ಲಾ  ಬರೀ ಊರ ಕಟ್ಟೆಗೆ ಸೀಮೀತವಾಗುತ್ತಿವೆ. ಅಷ್ಟಕ್ಕೂ ಶಾಶ್ವತ ಪರಿಹಾರ ಏನು, ಆ ಯೋಚನೆ ಏನೆಂದರೆ ಈಗಾಗಲೇ ಡ್ಯಾಂ ನಲ್ಲಿ ತುಂಬಿರುವ ಹೂಳು ತೆಗೆಯುವುದು. ಡ್ಯಾಂ ನಲ್ಲಿ ತುಂಬಿಕೊಂಡಿರುವ ಹೂಳು ರೈತರಿಗೆ ಅತಿದೊಡ್ಡ ಸಮಸ್ಯೆಯಾಗಿದ್ರು ಅದು ನಮ್ಮ ರೈತರಿಗೆ ತಿಳಿಯುತ್ತಿಲ್ಲ ಅನ್ನೋದು ವಿಷಾದನೀಯ ಸಂಗತಿ. ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬಂದರು ಹೂಳು ತುಂಬಿರುವ ಕಾರಣ ಹೆಚ್ಚು ಸಂಗ್ರಹಿಸಲಾಗಿದೆ ಹೊರಬಿಡಲಾಗುತ್ತದೆ. ಸದ್ಯ ಇರುವ ಸಂಗ್ರಹದ ಸಾಮರ್ಥ್ಯ ಒಂದು ಬೆಳೆಗೆ ಸರಿಯಾಗುತ್ತಿದೆ, ಒಂದು ವೇಳೆ ಹೂಳು ತೆಗದೆರೆ ಸರಾಗವಾಗಿ ಸುಖವಾಗಿ ರೈತ ಎರಡನೇ ಬೆಳೆ ಬೆಳೆದು ಕೊಳ್ಳಬಹುದು. 

ಹೂಳು ತೆಗೆಯುವ ಯೋಜನೆ ಅತ್ಯಂತ ಕ್ಲಿಷ್ಟಕರವಾದದ್ದು ಆದ ಕಾರಣ 
ಹೂಳು ತೆಗೆಯಲಕ್ಕಿ ಆಗಲಿಲ್ಲವಾದರು, ಜಲಾಶಯಕ್ಕೆ ಸಮನಾಂತರವಾಗಿ ಇನ್ನೊಂದು ಜಲಾಶಯ ನಿರ್ಮಾಣ ಮಾಡುವ ಮೂಲಕವಾದರು ರೈತರ ಶಾಸ್ವತ ಸಂತೋಷಕ್ಕಾಗಿ  ರಾಜ್ಯ ಸರ್ಕಾರ ಯೋಚಿಸಲಿ ರೈತರ ಏಳ್ಗೆಯನ್ನ ಕಾಯಲಿ.


ಈಗಲಾದರೂ ಓ ರೈತರೆ ಎಚ್ಚೆತ್ತುಕೊಳ್ಳಿ ನಿಮ್ಮ ಭವಿಷ್ಯ ಉಜ್ವಲವಾಗಲಿದೆ ಇಲ್ಲವಾದರೆ ನಿಮ್ಮ ವಿನಾಶ ನಿಮ್ಮ ಕೈಯಿಂದ ಆಗಲಿದೆ. 
                        ಜೈಹೋ ರೈತ 

Saturday, August 4, 2018

ಸ್ನೇಹಬಂಧ

     
 

ಸ್ನೇಹಬಂಧ

                                 - ಬಸವರಾಜ ಉಮಲೂಟಿ


ಓ ಗೆಳೆಯ ಗೆಳತಿಯರೆ, 
ಈ ದಿನ ನಮ್ಮ ದಿನ, 
ನಮ್ಮೆಲರ ಬಾಂಧವ್ಯ ಸಾರುವ ದಿನ. 

ಜೊತೆ ಜೊತೆಗೆ ಗೋಲಿ, ಲಗೋರಿ, 
ಆಡಿದವರ ಸ್ಮರಿಸುವ ಹೊತ್ತು, 
ಕ್ಲಾಸಿಗೆ ಚಕ್ಕರ್ ಹಾಕಿ ಹಿಂದೆ ಬಂದರು ಆವತ್ತು, 
ಅವರೆಲ್ಲರನ್ನ ಮೆಲುಕು ಹಾಕುವ ಘಳಿಗೆ ಬಂದಿದೆ ಇವತ್ತು. 

ಲಗೋರಿ ಆಟಗಳು, 
ಫೇಸ್ಬುಕ್ ಚಾಟ್ ಗಳು, 
ಇವೆಲ್ಲವೂ ಕೂಡಿಸಿದವು, 
ಗೆಳೆಯರ ಬಳಗವು. 

ನಮ್ಮ ಈ ಸ್ನೇಹಲೋಕವು 
ಬೆಳಗಲಿ ಜಗದ ಲೋಕಕೆ, 
ಅಮರವಾಗಲಿ ನಮ್ಮ ಸ್ನೇಹದ  ಕುರುಹುಗಳು. 

ನನ್ನೆಲ್ಲಾ ಸ್ನೇಹವೃಂದಕ್ಕೆ ಸ್ನೇಹ ದಿನಾಚರಣೆಯ ಶುಭಾಶಯಗಳು 💐 🎉

Sunday, July 22, 2018

ವಿದ್ಯಾರ್ಥಿ ಸಂಘಟನೆಗಳೆ ವಿದ್ಯಾರ್ಥಿಗಳಿಗೆ ಮುಳುವಾಗುತ್ತಿದ್ದಾವ?

ವಿದ್ಯಾರ್ಥಿ ಸಂಘಟನೆಗಳೆ ವಿದ್ಯಾರ್ಥಿಗಳಿಗೆ ಮುಳುವಾಗುತ್ತಿದ್ದಾವ?

ಹೌದು,ಈ ಒಂದು ಪ್ರಶ್ನೆ ಎಲ್ಲರಲ್ಲೂ ಸಹಜವಾಗಿ ಮೂಡುವಂತದ್ದೆ. ಯಾವುದೇ ಸಂಘಟನೆಗಳಾಗಲಿ (ABVP, NSUI,AIDSO etc) ಅವುಗಳ ಉದ್ದೇಶ, ಸಿದ್ದಾಂತಗಳು ವಿದ್ಯಾರ್ಥಿಗಳ ಪರವಾಗಿಯೆ ಇರಬಹುದು ಆದರೆ ಇವುಗಳಲ್ಲಿನ ಇರುಸು ಮುರುಸು,ಒಗ್ಗಟ್ಟಿನ ಕೊರತೆ,ವಿವಿಧ ರೂಪದ ಸಂಘಟನಾತ್ಮಕ ಹೋರಾಟಗಳು ವಿದ್ಯಾರ್ಥಿಗಳನ್ನ ಗೊಂದಲಕ್ಕೆ ದೂಡುತ್ತಿವೆ.

ಇವುಗಳಲ್ಲಿ ನಡೆಯುತ್ತಾದರು ಏನು ಅಂದರೆ ಇವುಗಳ ಒಗ್ಗಟ್ಟಿನ ಕೊರತೆಯಿಂದ, ಯಾವುದೇ ಒಂದು ವಿದ್ಯಾರ್ಥಿಗಳ ತೊಂದರೆ ಮೇಲಿನ ಹೋರಾಟಗಳು ಅನೇಕ ಸಂಘಟನೆಗಳಿಂದ  ವಿವಿಧ ರೀತಿಯಲ್ಲಿ ವಿವಿಧ ದಿನಗಳಲ್ಲಿ ನಡೆಸುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುತ್ತದೆ.

ಇತ್ತೀಚಿಗೆ ಉಚಿತ ಬಸ್ ಪಾಸ್ ವಿತರಣೆ ವಿಚಾರದಲ್ಲಿ ಎಡವಿದ ಸರ್ಕಾರಕ್ಕೆ ಬಿಸಿ ಮುಟ್ಟಿಸಲೆಂದು ಅನೇಕ ವಿದ್ಯಾರ್ಥಿ ಸಂಘಟನೆಗಳು ಹೋರಾಟ ಮಾಡಿ ಮನವಿ ಕೂಡ ಸಲ್ಲಿಸದರು ಇದರಲ್ಲೇನು ಅಭ್ಯಂತರವಿಲ್ಲ ಆದರೆ ಅನೇಕ ಸಂಘಟನೆಗಳು ದಿನಕ್ಕೊಂದರಂತೆ ಹೋರಾಟ ನಡೆಸಿವೆ. ಹೀಗೆ ದಿನಕ್ಕೊಬ್ಬರಂತೆ ಶಾಲಾ ಕಾಲೇಜ್ ಬಂದ್ ಮಾಡಿಸಿ ಹೋರಾಟದ ಮೂಲ ಆದ ವಿದ್ಯಾರ್ಥಿಗಳನ್ನ ಹೋರಾಟಕ್ಕೆ ಕರೆದೊಯ್ಯುದರಿಂದ ವಿದ್ಯಾರ್ಥಿಗಳ ತರಗತಿಗಳು ಹಾಳಾಗುವುದರಿಂದ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗುತ್ತಿದೆ..

ಎಲ್ಲಾ ಸಂಘಟನೆಗಳು ವಿದ್ಯಾರ್ಥಿಗಳ ಪರನೆ ಇವೆ ಆದರೆ ನಿಮ್ಮಲ್ಲಿನ ಒಗ್ಗಟ್ಟಿನ ಶಕ್ತಿಯ ಕೊರತೆ ಕಾಡುತ್ತಿದೆ. ನಿಮ್ಮ ಒಗ್ಗಟ್ಟಿನ ಮಂತ್ರ ವಿದ್ಯಾರ್ಥಿಗಳ ಕೂಗನ್ನ ಹೆಚ್ಚಿಸಿ, ಸಮಸ್ಯೆಗಳಿಗೆ ಪರಿಹಾರ ಕೊಡಿಸಬಲ್ಲದು, ಎಂಬುವುದು ಒಬ್ಬ ವಿದ್ಯಾರ್ಥಿಯಾಗಿ ನನ್ನ ಆಶಯ.    
                 -ಯು ಬಸವರಾಜ

Monday, June 4, 2018

ಮಾಸ್ತಾರ ಮಂಜುನಾಥ


      

                  

                  ಮಾಸ್ತಾರ ಮಂಜುನಾಥ 


                                     - ಬಸವರಾಜ ಉಮಲೂಟಿ 

   ಅಮಾಯಕನು ನೀನು,                                                ಮುಗ್ಧಜೀವಿಯೂ ನೀನು,                                            ಅಂತ ಅಂದುಕೊಂಡಿದ್ದೆ ನಾನು,                                  ಆದರೆ ಗೊತ್ತಾಯ್ತು ನೀ,                                              ಪಾಪ ಹುಡುಗರನ್ನ                                                      ರೂಮಲ್ಲಿ ಹಾಕಿ                                                          ಪಾಠವ ಭೋಧಿಸಿ  ಓದು ಓದು ಎನ್ನುವಾಗ,                  ನೀನೊಬ್ಬ ಖಡಕ್ ಮಾಸ್ತಾರ ಎಂದು. 


   ಮತ್ತೆ ಆಮೇಲೆ ಗೊತ್ತಾಯ್ತು ನೀ ನಿನ್ನ,                          ವಿದ್ಯಾರ್ಥಿಗಳ ವಿದ್ಯಾರ್ಥಿ ಎಂದು,                                ಸಹಪಾಠಿಗಳ ಆದರ್ಶವೆಂದು,                                      ಗೆಳೆಯರ ಸಹ್ರದಯಿ ಎಂದು,                                      ಕುಟುಂಬದ ಹೊಳೆಯುವ ವಜ್ರವೆಂದು,                        ನಾ ನಿನ್ನ ಮನಸಾರೆ ಕರೆಯುವೆ ಮಂಜಪ್ಪಣ್ಣನೆಂದು. 

  

   ಈ ದಿನ ಜನ್ಮದಿನದ ಸಂಭ್ರಮದಲ್ಲಿರುವ                         ನಿನಗೆ ನಾ ತಿಳಿಸುವೆ,                                                  "ಹುಟ್ಟು ಹಬ್ಬದ ಶುಭಾಶಯಗಳು" 💐 🎂 ಎಂದು         ನೂರಾರು ವರ್ಷ ಸುಖಕರವಾಗಿ,                                 ಚಿರಕಾಲವಾಗಿ, ಜನಸ್ನೇಹಿಯಾಗಿ                                 ಬಾಳು ನೀ ಎಂದೆದೂ. 🎉 💐         

                                                    

Tuesday, February 13, 2018

ಹಂಪನಗೌಡ್ರು (ನಮ್ಮ ಸಿಂಧನೂರು ಎಂಎಲ್ಎ)

             ಹಂಪನಗೌಡ್ರು

                          ( ನಮ್ಮ ಸಿಂಧನೂರು ಎಂಎಲ್ಎ) 

   
                                  - ಬಸವರಾಜ ಉಮಲೂಟಿ 
                                        ಸಾ|| ಕೆ.ಹಂಚಿನಾಳ

        ನಮ್ಮ ಊರು ಸಿಂಧನೂರು, 
        ಸೋನಮಸೂರು ಸೂರು ಈ ಊರು. ||ಪ||

        ನಮ್ಮೆಲ್ಲರ ಸಾಹೇಬ್ರು ಹಂಪನಗೌಡ್ರು, 
        ಗೌಡರ ಕನಸಿನ ಕೂಸು ಸಿಂಧನೂರು, 
        ನಾಲ್ಕು ಬಾರಿ ಆದರು ಶಾಸಕರು, 
        ಅಭಿವ್ರದ್ಧಿ ಮಾಡಿದ್ರು ಸಿಂಧನೂರು. ||೧||

        ನಮ್ಮ ಭತ್ತ ಸೂಪರ್ರೋ  ಸೂಪರ್ 👌, 
        ಟ್ರಾಕ್ಟರ್ ಮಾರಾಟದಲ್ಲಿ ನಂಬರ್ ಒನ್, 
       ತಾಲೂಕ ಅಂದ್ರೆ ಸಿಂಧನೂರು ಅಂದ್ರು ಗೂಗಲ್ನವ್ರು
       ಇದಕ್ಕೆಲ್ಲ ಕಾರಣೀಭೂತರು ನಮ್                                                           ಹಂಪನಗೌಡ್ರು.   ||೨||



       ಚಿಹ್ನೆ ಬದಲಿಸಿದರು ಇಳಿಯಲಿಲ್ಲ ಖದರ್, 
       ಖುರ್ಚಿ ಹಿಂದೆ ಬೀಳದೆ ಜನರ ಅಭಿವೃದ್ಧಿ
                                                      ಮಾಡಿದರು, 
       65 ರ ಇಳಿವಯಸ್ಸಿನಲ್ಲೂ 35ರ ಯುವಕನಂತೆ     
                                                        ಓಡಾಟ, 
       25ರ ಯುವ ಮನಸ್ಸಿನಂತೆ ತುಡಿತ. ||೩||



      ಸಿಂಧನೂರೆ ಕುಟುಂಬ ಎಂದರು, 
     ಸಿಂಧನೂರಿನ ಜನತೆನೆ ಕುಟುಂಬಸ್ಥರೆಂದರು, 
    ಸಿಂಧನೂರ ಜನರ ಹಿರಿಮೆ, ಗರಿಮೆ, 
   ನಮ್ಮೆಲ್ಲರ ಹೆಮ್ಮೆಯ ಕಿರೀಟ ಹಂಪನಗೌಡ್ರು. ||೪||

         

Thursday, January 18, 2018

ಹಳ್ಳಿಕಟ್ಟೆ

ಹಳ್ಳಿಕಟ್ಟೆ 
              (ಕಟ್ಟೆವಾಲಗಳು, ಗಂಜಿವಾಲಗಳು)       



ಬಿಳಿ ಅಂಗಿ, ಬಿಳಿ ಪಂಚೆ.
ಅದರ ಜೊತೆಗೆ ಖಡಕ್ ಗಂಜಿ,
ಖಡಕ್ ಖಡಕ್ ಸುದ್ದಿಯೊಂದಿಗೆ,
ಮಾತಾಡುತ ಕಟ್ಟೆಗೆ ಕುಳಿತಿರುವರು,
ಕಟ್ಟೆವಾಲಗಳು ಅವರೆ ಕಟ್ಟೆವಾಲಗಳು! ||೧||


ಶಿಸ್ತು, ಸಮಯಪಾಲನೆಯ ರೂವಾರಿಗಳು.
ಮಧ್ಯಾಹ್ನಕ್ಕೊಂದು ಸ್ಟ್ರಾಂಗ್, ಟೀ, ಬೀಡಿ, ಸಿಗರೇಟ್ ಗಳು.
ಊರ ವಿಮರ್ಶಕರು, ಚಿಂತಕರು, ಏಳ್ಗೈಯ್ಯುವವರು.
ವೇದಿಕೆ ಹಿಂದಿನ ಖ್ಯಾತ ವಾಗ್ಮಿಗಳು ಅವರೆ ಕಟ್ಟೆವಾಲಗಳು. ||೨||


ರಾಜಕೀಯ ವಿಶ್ಲೇಷಣೆಗಳು,
ಊರ ಓಣಿಯ ಸುದ್ದಿಗಳು,
ಯಾವ ಯಾವ ವಾಚಕರಿಗೂ,
ಕಡಿಮೆಯಿರದ ಒಬ್ಬೊಬ್ಬರ ಸ್ಪೀಚುಗಳು,
ಗಂಜಿವಾಲಗಳು ಅವರೆ ಕಟ್ಟೆವಾಲಗಳು ||೩||



ಉದ್ದಾರವಾದವನನ್ನ ಹೊಗಳುವರು,
ಹಳ್ಳ ಹಿಡಿದವನ ನೂಕುವರು,
ಸಮಯಕ್ಕೆ ತಕ್ಕಂತೆ ಬಕೆಟ್ ಹಿಡಿಯುವವರು,
ನೇರ ನುಡಿ, ನೇರ ಮಾತು ಸಹಿಸಿಕೊಳ್ಳದವರು,
ಆದರೆ ಏನೆ ಹೇಳಿ ಇವರೆ ಜೀವನದ ಮಾರ್ಗದರ್ಶಕರು,
ಅವರೆ ಹಳ್ಳಿ ಕಟ್ಟೆವಾಲಗಳು, ಗಂಜಿವಾಲಗಳು, ಬರ್ನಿಂಗ್ ಬ್ರೆಡ್ ಗಳು ||೪||

        - ಬಸವರಾಜ ಉಮಲೂಟಿ (ಯು.ಬಿ)
     ಮೊ:೯೯೧೬೪೦೩೪೧೯
     ಕೆ.ಹಂಚಿನಾಳ
     ಸಿಂಧನೂರು
     ರಾಯಚೂರು.

Tuesday, January 9, 2018

ಭತ್ತದ ಪೈರಿಗೆ ರೈತನ ಕಣ್ಣೀರು

                 ಭತ್ತದ ಪೈರಿಗೆ ರೈತನ ಕಣ್ಣೀರು 
                              (ತುಂಗಭದ್ರಾ ಒಡಲಿನ ರೈತನ ವ್ಯಥೆ)                          
                                      - ಬಸವರಾಜ ಉಮಲೂಟಿ    
                    ರೈತ ದೇಶದ ಬೆನ್ನೆಲುಬು, ರೈತನಿಲ್ಲದೆ ನಾವಿಲ್ಲ ಎಂದು ಬೊಗಳೆ ಬಿಡುತ್ತಾ ತಮ್ಮ ಬಕೆಟ್ ಹಿಡಿಯುತ್ತಿದ್ದಾರೆ ಹೊರತು ರೈತರಿಗೆ ಕಿಂತಿಷ್ಟು ಮಾಡಿಲ್ಲ. ಸದಾ ರೈತರ ಹೆಸರು ಹೇಳಿಕೊಂಡು ರಾಜಕೀಯ ಮಾಡ್ತಾ ಇದ್ದಾರೆ ಹೊರತು ರೈತಪರ, ರೈತ ಕಾಳಜಿಯುಳ್ಳ ಕಾರ್ಯಕ್ರಮಗಳು ಹೊರಬಂದಿಲ್ಲ,ಇನ್ನೂ ಬಜೆಟ್ ಕ್ರಷಿಗೆ ಅಷ್ಟು ಇಷ್ಟ ಅಂತ ಹೇಳಿ ಒಟ್ಟಾರೆ ಕೋಟಿಗಟ್ಟಲೆ ಕೊಡ್ತಾರೆ ಆದರೆ ಅವು ಬರಿ ಪೇಪರ್ ಗಳಿಗೆ ಮಾತ್ರ ಸೀಮೀತವಾಗಿವೆ ಅಪ್ಪಿತಪ್ಪಿ ಒಂದಿಷ್ಟು ದುಡ್ಡು ಬಂದರೂ ಅರ್ಧ ರಾಜಕಾರಣಿಗಳ ಜೇಬಿಗೆ ಇನ್ನರ್ಧ ಅಧಿಕಾರಿಗಳ ಹೆಂಡತಿ ಮಕ್ಕಳಿಗೆ.

                      ಸಾವಿರಾರು ಕೋಟಿ ಸಾಲ ತಗೆದುಕೊಂಡವರಿಗೆ ಮಾಫಿಯಾ ಭಾಗ್ಯ ಸಾವಿರ ರೂಪಾಯಿ ಸಾಲ ತಗೊಂಡ ರೈತನಿಗೆ ಮಾತ್ರ ಸಾವಿನ ಭಾಗ್ಯ ಅಂತಾಗಿದೆ. ಇನ್ನೂ ಈ ರಾಜಕಾರಣಿಗಳ ತೆವಲು ಇಲ್ಲಿಗೆ ಬಿಟ್ಟೀತೆ ರೈತನ ಸಾವಿನಲ್ಲೂ ತಮ್ಮ ವೋಟ್ ಬ್ಯಾಂಕ್ ಸಲುವಾಗಿ ವೋಟ್ ಬ್ಯಾಂಕ್ ರಾಜಕಾರಣ.ರೈತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡೋದು ಹೇಳಿದ್ ಕೆಲಸ ಮಾಡದೆ ವಚನಭ್ರಷ್ಟ ರಾಗಿ ರೈತರ ಸಾವಿಗೆ ಕಾರಣರಾಗೋದು.ನಿಜವಾಗ್ಲು  ರೈತನಿಗೆ ಯಾವುದೆ ರೀತಿಯ ಸಾಲ ಮನ್ನಾದ ಅವಶ್ಯಕತೆನೆ ಇಲ್ಲ, ರೈತನಿಗೆ ಸೂಕ್ತ ಸಮಯಕ್ಕೆ ಸರಿಯಾದ ಮಟ್ಟದಲ್ಲಿ ನೀರು, ಧಾನ್ಯಕ್ಕೆ ತಕ್ಕ ಬೆಂಬಲ ಬೆಲೆ ಕೊಟ್ಟರೆ ರೈತರೆ ಸರ್ಕಾರಕ್ಕೆ ಸಾಲ ಕೊಡುವಂತರಾಗುತ್ತಾರೆ.
               ಇನ್ನೂ ನೀರು ಎಂದ ತಕ್ಷಣ ನೆನಪಾಯಿತು ನಮ್ಮ ರಾಜ್ಯದ ರೈತರಿಗೆ ನೀರಿನಲ್ಲಿ ಅನೇಕ ತರಹದ ವಂಚನೆ ನಡೀತಾನೆ ಬಂದಿದೆ ಕಾವೇರಿ ಹೆಸರಲ್ಲಿ ತಮಿಳುನಾಡಿನಿಂದ ಮೋಸ, ಮಹಾದಾಯಿ ಎನ್ನೋ ತಾಯಿಯ ಮಕ್ಕಳಿಗೆ(ರೈತರಿಗೆ) ಗೋವಾ, ಮಹಾರಾಷ್ಟ್ರ ದಿಂದ ವಂಚನೆ
ನಡೀತಾನೆ ಇದೆ ನಮ್ಮ ರೈತರ ಮೇಲೆ.
                     ಇನ್ನೂ ಇವು ಬೇರೆ ರಾಜ್ಯದಿಂದ ವಂಚನೆ ಆದರೆ ನಮ್ಮ ರಾಜ್ಯದಲ್ಲಿ ನಮ್ಮವರಿಂದ ನಮ್ಮ ರೈತರಿಗೆ ಮೋಸ ನಡೀತಿದೆ. ಇದಕ್ಕೆ ಸೂಕ್ತ ಉದಾಹರಣೆ ಅಂದರೆ ತುಂಗಭದ್ರಾ ಒಡಲಿನ ಎಡದಂಡೆ ಕಾಲುವೆಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೆಳೆಗೆ ನೀರು ನೀಡದೆ ಮಾಡುತ್ತಿರುವ ಅನ್ಯಾಯ . ಡ್ಯಾಂ ನಲ್ಲಿ 35 ಟಿಎಂಸಿ ಹೂಳು ತುಂಬಿದೆ ಇದನ್ನು ತೆಗೆಯಲು  ಯಾವುದೆ ಸರ್ಕಾರ ಕೂಡ ಮುಂದೆ ಬರ್ತಾ ಇಲ್ಲ. ಈ ಹೂಳು ತೆಗದರೆ ರೈತರು ನಿಶ್ಚಿಂತೆಯಿಂದ ವರ್ಷಕ್ಕೆ ಎರಡು ಫಸಲನ್ನ ತೆಗೆದುಕೊಳ್ಳಬಹುದು. ಈ ಭಾಗದ ರೈತರಿಗೆ ಈ ಒಂದು ಸಮಸ್ಯೆ ಆದರೆ ಇನ್ನೊಂದು ಭೀಕರ ಸಮಸ್ಯೆ ಕಾಡುತಿದೆ. ಅದೇನಂದರೆ ರಾಜಕೀಯದವರ ಆಟದಿಂದ ಬೇಕಾದ ಕಾರ್ಖಾನೆಗಳಿಗೆ ಸದ್ದಿಲ್ಲದೆ ಸರಾಗವಾಗಿ ಸಾಗುತಿದೆ ತುಂಗೆಯ ಒಡಲು. ಹೊಸಪೇಟೆ ಸುತ್ತ ಮುತ್ತಲಿನ ಫ್ಯಾಕ್ಟರಿ ಗಳಿಗೆ ತುಂಗೆ ಸೋರಿ ಹೋಗುತಾ ಇದ್ದಾಳೆ ಈಕಡೆ ರಾಜಕಾರಣಿಗಳ ಜೇಬು ತುಂಬುತ್ತಿದೆ.
                   ಒಟ್ಟಾರೆ ರಾಜಕೀಯದವರ ಡೊಂಬರಾಟದಿಂದ ರೈತರಿಗೆ ಸೂಕ್ತವಾಗಿ ಸರಿಯಾದ ಕ್ರಮದಲ್ಲಿ ನೀರು ಸಿಗದೆ ವರ್ಷಕ್ಕೆ ಒಂದೂ ಬೆಳೆಯನ್ನ ಬೆಳೆಯಲಿಕ್ಕೆ ಕ್ಲಿಷ್ಟಕರವಾಗಿದೆ. ಈ ವರ್ಷ ಮೊದಲನೆ ಬೆಳೆಗೆ  ನೀರಿದ್ದರು ಬಿಡದೆ ಸತಾಯಿಸಿ ಒಂದು ತಿಂಗಳ ತಡವಾಗಿ ನೀರು ಕೊಟ್ಟು ರೈತರನ್ನ ಗೊಂದಲಕ್ಕೆ ನೂಕಿದ್ದರು.ಎರಡನೇ ಬೆಳೆಗೆ ರೈತ ಸಸಿಮಡಿ ಹಾಕಿ ಪೂರ್ವಸಿದ್ಧತೆ ಮಾಡಿಕೊಂಡು ಕೂತಾಗ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹಾಗೆ ಕೇವಲ 60 ದಿನ ಆನ್ ಆ್ಯಂಡ್ ಅಫ್ ಸಿಸ್ಟಮ್ ಮೂಲಕ ಕಾಲುವೆಗೆ ನೀರು ಹರಿಸುವುದಾಗಿ ಹೇಳಿ ಅಡ್ಡಗೋಡೆ ಮೇಲೆ ದೀಪ ಇಟ್ಟು ರೈತ ಬೆಳೆ ಬೆಳೆಯಲೊ ಬೇಡವೊ 60 ದಿನದಲ್ಲಿ ಬೆಳೆ ಕೈಗೆ ಸಿಗುವುದೆ? ಎನ್ನುವ ಕನ್ಫ್ಯೂಸಿಂಗ್ ನಲ್ಲಿ  ರೈತ ಚಿಂತಿಸುತ್ತಿದ್ದಾನೆ. ಆದರೂ ನಮ್ಮ ಭಾಗದ ರೈತರು ಗಟ್ಟಿ ಗುಂಡಿಗೆಯಿಂದ ನಾಟಿ ಮಾಡುತ್ತಾ ಇದ್ದಾರೆ, ಈ ರಾಜಕಾರಣಿಗಳು ಮೋಸ ಮಾಡಬಹುದು ಆದರೆ ಭೂಮಿ ತಾಯಿ ಮೂರಪ್ಪತ್ತಿನ ಊಟಕ್ಕೆ ಮೋಸ ಮಾಡಲಾರಳು ಎಂದು ಭೂಮಿ ತಾಯಿ ನೆನೆಯುತ್ತಾ ಕ್ರಷಿ ಕಾರ್ಯದಲ್ಲಿ ತೊಡಗಿದ್ದಾರೆ ನಮ್ಮ ರೈತಾಪಿ ವರ್ಗ. 
                        ~;ಜೈಹೋ ರೈತ;~