Saturday, November 10, 2018

ರೈತರೆ ಸ್ವಲ್ಪ ಎಚ್ಚೆತ್ತುಕೊಳ್ಳಿ.

           

   

                  ರೈತರೆ ಸ್ವಲ್ಪ ಎಚ್ಚೆತ್ತುಕೊಳ್ಳಿ. 

                                      - ಬಸವರಾಜ ಉಮಲೂಟಿ 

ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ರೈತರು  ತಮಗಾಗುತ್ತಿರುವ ಮೋಸ ವನ್ನು ಸಹ ಅರಿಯದ ಮುಗ್ಧರು, ನಮ್ಮ ಈ ಭಾಗದ ರೈತರಿಗೆ ನಾನಾ ಮೂಲಗಳಿಂದ ತೊಂದರೆಗಳು ಆಗುತ್ತಾ ಇವೆ ಅವುಗಳ ಅನಾವರಣವನ್ನೆ ಇಲ್ಲಿ ಮಾಡಲಿದ್ದೇನೆ. 

ಹೌದು, ಮೊದಲಿನಿಂದಲೂ ರೈತನಿಗೆ ಅಷ್ಟ ದಿಕ್ಕುಗಳಿಂದಲೂ ಮೋಸ ಆಗುತ್ತಲೆ ಬಂದಿದೆ ಅದು ಸರ್ಕಾರದ ಸೌಲಭ್ಯಗಳಲ್ಲಿ, ಬೆಲೆಗಳಲ್ಲಿ, ತೂಕಗಳಲ್ಲಿನ ವ್ಯತ್ಯಾಸ, ದಲ್ಲಾಳಿಗಳ ದಲ್ಲಾಳಿತನಕ ರೈತರಿಗೆ ಅನ್ಯಾಯವಾಗುತ್ತಿರುವುದು ಸಾಮಾನ್ಯವಾಗಿತ್ತು ಆದರೆ ಇತ್ತೀಚೀನ ದಿನಮಾನಗಳಲ್ಲಿ ರೈತರಿಗೆ ಒದಗಿಸುವ ನೀರಿನಲ್ಲೂ ಸಹ ಅನ್ಯಾಯ ಆಗುತ್ತಿದೆ. 
 ಅದು ಹೇಗೂ ಒಂದು ಬೆಳೆಗಳಿಗೆ ನೀರು ಪಡೆದುಕೊಂಡು ಬಿಸಿಲೆನ್ನದೆ ಮಳೆಯನ್ನದೆ ಆರೇಳು ತಿಂಗಳಲ್ಲಿ ಕಡಿಮೆ ದರದಲ್ಲಿ  ಸರ್ಕಾರದಿಂದ ಸಿಗಬೇಕಾದ ರಸಗೊಬ್ಬರ, ಕ್ರಿಮಿನಾಶಕಗಳು ಸಿಗದೆ ಫರ್ಟಿಲೈಜರ್ ಕಂಪನಿಗಳು ನೀಡುವ ರಸಗೊಬ್ಬರ, ಕೀಟನಾಶಕಗಳನ್ನ ಅದೇಗೊ ಸಾಲ ಮಾಡಿ ಸಾವಿರಾರು ರೂ ಗಳನ್ನ ಕೊಟ್ಟು ತಂದು ಸಿಂಪಡಿಸಿ ಬೆಳೆ 🌾 ತೆಗೆದುಕೊಂಡ ಮೇಲೆ ಶುರುವಾಗುತ್ತೆ ದಲ್ಲಾಳಿಗಳ ಕಾಟ, ಸೂಕ್ತ ಬೆಂಬಲ ಬೆಲೆ ಇಲ್ಲದೆ ಇರುವಾಗ ಅನೈತಿಕವಾಗಿ ಹೆಚ್ಚೆಚ್ಚು ಕಮಿಷನ್ ಪಡೆದು ರೈತರನ್ನ ಇನ್ನಷ್ಟು ನಷ್ಟಕ್ಕೆ ನೂಕುವ ಕೆಲಸ ಇತ್ತಿಚೀನ ದಿನಮಾನಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. 

ಇದು ಒಂದು ದುರಂತವಾದರೆ ಇನ್ನೊಂದು ಬಹುದೊಡ್ಡ ಕಂಟಕವೇನಂದರೆ ನಮ್ಮ ರೈತರ ನಿರ್ಲಕ್ಷ್ಯತನ ಅಂದರೆ ತಪ್ಪಾಗಲಿಕ್ಕಿಲ್ಲ. ನಮ್ಮ ಭಾಗದ ರೈತರಿಗೆ ತುಂಗಭದ್ರಾ ಡ್ಯಾಂ, ಡ್ಯಾಂನ ಸಂಗ್ರಹ, ಹೋರಾಟಗಳು ನೆನಪಾಗೋದು ಈ ಬೆಳೆಗೆ ನೀರಿಲ್ಲವೆಂದಾಗ ಮಾತ್ರ.ಆ  ಹೋರಾಟಗಳು ಸಹ ಕ್ಷಣಿಕ ಮಾತ್ರ. ತಾತ್ಕಾಲಿಕ ಪರಿಹಾರಕ್ಕಾಗಿ ಹೋರಾಡುವ ನಮ್ಮ ರೈತರು ಶಾಶ್ವತ ಪರಿಹಾರದ ಆಲೋಚನೆ ತಲೆಯಲ್ಲಿ ಇದ್ರು ಹೋರಾಟವಾಗಿ ಪರಿವರ್ತನೆ ಮಾಡಿಕೊಂಡು ಕೆಲಸ ಮಾಡಿಸಿಕೊಳ್ಳಲು ವಿಫಲರಾಗುತ್ತಿದ್ದಾರೆ. ಯೋಚನೆ, ಆಲೋಚನೆಗಳಲ್ಲಾ  ಬರೀ ಊರ ಕಟ್ಟೆಗೆ ಸೀಮೀತವಾಗುತ್ತಿವೆ. ಅಷ್ಟಕ್ಕೂ ಶಾಶ್ವತ ಪರಿಹಾರ ಏನು, ಆ ಯೋಚನೆ ಏನೆಂದರೆ ಈಗಾಗಲೇ ಡ್ಯಾಂ ನಲ್ಲಿ ತುಂಬಿರುವ ಹೂಳು ತೆಗೆಯುವುದು. ಡ್ಯಾಂ ನಲ್ಲಿ ತುಂಬಿಕೊಂಡಿರುವ ಹೂಳು ರೈತರಿಗೆ ಅತಿದೊಡ್ಡ ಸಮಸ್ಯೆಯಾಗಿದ್ರು ಅದು ನಮ್ಮ ರೈತರಿಗೆ ತಿಳಿಯುತ್ತಿಲ್ಲ ಅನ್ನೋದು ವಿಷಾದನೀಯ ಸಂಗತಿ. ಜಲಾಶಯಕ್ಕೆ ಸಾಕಷ್ಟು ನೀರು ಹರಿದು ಬಂದರು ಹೂಳು ತುಂಬಿರುವ ಕಾರಣ ಹೆಚ್ಚು ಸಂಗ್ರಹಿಸಲಾಗಿದೆ ಹೊರಬಿಡಲಾಗುತ್ತದೆ. ಸದ್ಯ ಇರುವ ಸಂಗ್ರಹದ ಸಾಮರ್ಥ್ಯ ಒಂದು ಬೆಳೆಗೆ ಸರಿಯಾಗುತ್ತಿದೆ, ಒಂದು ವೇಳೆ ಹೂಳು ತೆಗದೆರೆ ಸರಾಗವಾಗಿ ಸುಖವಾಗಿ ರೈತ ಎರಡನೇ ಬೆಳೆ ಬೆಳೆದು ಕೊಳ್ಳಬಹುದು. 

ಹೂಳು ತೆಗೆಯುವ ಯೋಜನೆ ಅತ್ಯಂತ ಕ್ಲಿಷ್ಟಕರವಾದದ್ದು ಆದ ಕಾರಣ 
ಹೂಳು ತೆಗೆಯಲಕ್ಕಿ ಆಗಲಿಲ್ಲವಾದರು, ಜಲಾಶಯಕ್ಕೆ ಸಮನಾಂತರವಾಗಿ ಇನ್ನೊಂದು ಜಲಾಶಯ ನಿರ್ಮಾಣ ಮಾಡುವ ಮೂಲಕವಾದರು ರೈತರ ಶಾಸ್ವತ ಸಂತೋಷಕ್ಕಾಗಿ  ರಾಜ್ಯ ಸರ್ಕಾರ ಯೋಚಿಸಲಿ ರೈತರ ಏಳ್ಗೆಯನ್ನ ಕಾಯಲಿ.


ಈಗಲಾದರೂ ಓ ರೈತರೆ ಎಚ್ಚೆತ್ತುಕೊಳ್ಳಿ ನಿಮ್ಮ ಭವಿಷ್ಯ ಉಜ್ವಲವಾಗಲಿದೆ ಇಲ್ಲವಾದರೆ ನಿಮ್ಮ ವಿನಾಶ ನಿಮ್ಮ ಕೈಯಿಂದ ಆಗಲಿದೆ. 
                        ಜೈಹೋ ರೈತ